ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 10ರಂದು ಎಐಟಿಯುಸಿ ಪ್ರತಿಭಟನೆ

Vishwanath S
Updated On : 9 Jan 2014, 1:14 am

ಹಾಸನ: ಕಾಯಂ ನೇಮಕಾತಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ. 10ರಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಯ ಫೆಡರೇಷನ್(ಎಐಟಿಯುಸಿ) ಜಿಲ್ಲಾಧ್ಯಕ್ಷೆ ಎಸ್.ಎನ್. ಜಯಲಕ್ಷ್ಮಿ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕ್ರಮವಾಗಿ ಸಿ ಮತ್ತು ಡಿ ಗ್ರೂಪ್ ನೌಕರರೆಂದು ಖಾಯಂಗೊಳಿಸಬೇಕು ಹಾಗೂ ಕನಿಷ್ಟ ರು. 12,500 ಮಾಸಿಕ ವೇತನ ನೀಡಿ, ಸೇವಾ ಅವಧಿಯ ಆಧಾರದಲ್ಲಿ ವರ್ಷಕ್ಕೆ ರು. 200 ಹೆಚ್ಚುವರಿ ನೀಡಬೇಕು. ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾನ ಸಂಭಾವನೆಯನ್ನು ನೀಡಲು ತಕ್ಷಣದಿಂದ ಬರಿಸಿ ಅಲ್ಲಿಗೆ ಸಹಾಯಕಿಯರನ್ನು ನೇಮಿಸಬೇಕು. ಅಂಗನವಾಡಿ ಕೇಂದ್ರಗಳ ಪೂರ್ಣ ಜವಾಬ್ದಾರಿಯನ್ನು ಐಸಿಡಿಎಸ್ ಇಲಾಖೆಯಿಂದ ಸರ್ಕಾರವೇ ನಡೆಸಬೇಕೇ ಹೊರತು, ಖಾಸಗಿ ಸಂಸ್ಥೆಯವರಿಗಾಗಲಿ, ಎನ್‌ಜಿಒಗಳಿಗಾಗಲಿ ನೀಡಬಾರದೆಂದು ಒತ್ತಾಯಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸದಾಗಿ ರಚಿಸಿರುವ ಮಿಷನ್ ಮೋಡ್ ಯೋಜನೆಯನ್ನು ಜಾರಿಗೆ ತರಬಾರದು. ಪ್ರಸ್ತೂತದಲ್ಲಿ ಜಾರಿಗೆ ತಂದಿರುವ ಪಿಂಚೂಣಿ ಯೋಜನೆಯ ಅವೈಜ್ಞಾನಿಕ ಹಾಗೂ ಅವಾಸ್ತವಿಕ ಯೋಜನೆಯಾಗಿದ್ದು, ಅಂಗನವಾಡಿ ಉದ್ಯೋಗಿಗಳು ನಿವೃತ್ತಿಯಾದಾಗ ಇರುವ ವೇತನದ ಅರ್ಧದಷ್ಟು ಪಿಂಚಣಿ ನಿಗದಿ ಮಾಡಿ, ಈಗಾಗಲೇ ನಿವೃತ್ತಿ ಹೊಂದಿರುವವರಿಗೆ ಕನಿಷ್ಟ ರು. 3 ಸಾವಿರ ಮಾಸಿಕ ವೇತನ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಸಿ. ಡೋಗ್ರೆ, ಎಐಟಿಯುಸಿ ನ ನಾಗರತ್ನಮ್ಮ, ಶಾಂತಮ್ಮ, ಕುಶಾಲವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement