ಸಾರಿಗೆ ಬಸ್ ನಿಲುಗಡೆಗೆ ಸಂಘಟನೆಗಳ ಆಗ್ರಹ
ಕ.ಪ್ರ.ವಾರ್ತೆ , ಸಕಲೇಶಪುರ , ಜ. 8
ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪ ಸಾರಿಗೆ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸ ಬೇಕು ಎಂದು ಒತ್ತಾಯಿಸಿ ನಾಗರಿಕ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಾನಾ ಸಂಘಟನೆಗಳ ಮುಖಂಡರು ಪಟ್ಟಣದ ಹಳೇ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಈಡೇರದ ಭರವಸೆ: ಪಟ್ಟಣದ ಹೊರವಲಯದಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಹೊರಡುವ ಬಸ್ಗಳು ಹಳೇ ಬಸ್ ನಿಲ್ದಾಣದ ಸಮೀಪ ನಿಲುಗಡೆಗೆ ಅವಕಾಶ ಇಲ್ಲದ ಪರಿಣಾಮ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಜಿಲ್ಲಾಕಾರಿಗಳ ಗಮನ ಸೇಳೆದ ಸಂದರ್ಭದಲ್ಲಿ ಹಳೇತಾಲೂಕು ಕಚೇರಿ ಹಾಗೂ ಅಬಕಾರಿ ಕಚೇರಿ ಕಟ್ಟಡಗಳನ್ನು ನೆಲಸಮಗೊಳಿಸಿ ಸಾರಿಗೆ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಇವರ ಭರವಸೆ ನೀಡಿ, ವರ್ಷಗಳೇ ಕಳೆದರೂ, ತಾಂತ್ರಿಕ ಕಾರಣ ನೀಡಿ ಕಟ್ಟಡ ನೆಲಸಮ ಮಾಡಲು ಜಿಲ್ಲಾಡಳಿತ ಮುಂದಾಗಿಲ್ಲ. ಇದರಿಂದಾಗಿ ದಿನನಿತ್ಯ ಸಾವಿರಾರರು ಪ್ರಯಾಣಿಕರು ಹೂಸ ಬಸ್ ನಿಲ್ದಾಣಕ್ಕೆ ಆಟೋಗಳಲ್ಲಿ ಅಥಾವ ಕಾಲ್ನಡಿಗೆಯಲ್ಲಿ ಸಂಚರಿಸಬೇಕಿದೆ. ಆದ್ದರಿಂದ ಶೀಘ್ರವೇ ಈ ಕಟ್ಟಡಗಳನ್ನು ನೆಲಸಮಗೊಳಿಸಿ ಬಸ್ ತಂಗುದಾಣ ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಪಾರ್ವತಿ ಮನವಿ ಸ್ವೀಕರಿಸಿ ಮಾತನಾಡಿ, ಪ್ರತಿಭಟನಾಕಾರರ ಬೇಡಿಕೆಯನ್ನು ಜಿಲ್ಲಾಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ಇತ್ಯರ್ಥ್ಯಕ್ಕೆ ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು.
ಪುರಸಭಾಧ್ಯಕ್ಷರ ಭರವಸೆ: ಪುರಸಭೆಯ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಸುತ್ತಿದ್ದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು. ಪಟ್ಟಣದ ಹಳೇ ತಾಲ್ಲೂಕು ಕಚೇರಿಯ ಶಿಥಿಲ ಕಟ್ಟಡದ ಮುಂಭಾಗ ಬಸ್ ತಂಗುದಾಣ ನಿರ್ಮಿಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಒತ್ತಾಯಿಸಿದರು. ಪ್ರತಿಭಟನಾಕಾರೊಂದಿಗೆ ಮಾತನಾಡಿದ ಪುರಸಭೆಯ ಅಧ್ಯಕ್ಷ ಸತೀಶ್, ಈ ಬಗ್ಗೆ ಜಿಲ್ಲಾಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ತಾತ್ಕಾಲಿಕವಾಗಿ ಬಸ್ ನಿಲ್ಲಿಸಲು ಅನುಕೋನವಾಗುವ ಹಾಗೆ ಸಕಲ ಸೌಕರ್ಯ ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ನಾಗರಿಕ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಬ್ಯಾಕರವಳ್ಳಿ ಜಯರಾಜ್, ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್, ರೈಲು ಸೌಲಭ್ಯ ಹೋರಾಟ ಸಮಿತಿ ಅಧ್ಯಕ್ಷ ನಾರಾಯಣ ಆಳ್ವ, ದಸಂಸ ಲಕ್ಷ್ಮಣಣ್ಕೀರ್ತಿ, ದಸಂಸ ವಿದ್ಯಾರ್ಥಿ ಒಕ್ಕೋಟದ ಅಧ್ಯಕ್ಷ ಕಿರಣ್, ವರ್ತಕರ ಸಂಘದ ಅಧ್ಯಕ್ಷ ವಾಸನ್ಸ್ ಹರೀಶ್, ಜಯ ಕರ್ನಾಟಕದ ಸುರೇಶ್ ಆಳ್ವಾ, ಕನ್ನಡ ರಕ್ಷಣಾ ವೇದಿಕೆಯ ಅಶ್ವತ್, ವೀರಕನ್ನಡಿಗ ಟಿಪ್ಪು ಸೇನೆಯ ಝಾಕೀರ್, ಉಪಾಧ್ಯಕ್ಷ ಝುಬೇರ್, ಕಾರ್ಯದರ್ಶಿ ಶಪಿ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೈ ಭೀಮ್ ಮಂಜು, ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರ ಶೇಕರ್, ರೈತ ಸಂಗದ ಮುಖಂಡ ಜಾನೆಕೇರೆ ಮೂಹನ್, ಅಂಬೇಡ್ಕರ್ ಕಟ್ಟಡ ನಿರ್ಮಾಣ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಮಳಲಿ ಶಿನಣ್ಣ, ಶ್ರೀವಿದ್ಯಾ ಗಣಪತಿ ಸೇವ ಸಮಿತಿಯ ಅಧ್ಯಕ್ಷ ಸುರೇಶ್, ಕಾಂಗ್ರೆಸ್ ಮುಖಂಡ ಇಲ್ಯಾಸ್ ಸಾಭ್ಜಿ, ಭಜರಂಗ ದಳದ ವಿಜಯಕುಮಾರ್ ,ರಘು, ಟಿ ರಾಜ್ ಕುಮಾರ್, ಸೇರಿದಂತೆ ಇನ್ನು ಅನೇಕ ಸಂಘ ಸಂಸ್ಥೆ ಮುಖಂಡರು ಹಾಜರಿದ್ದರು.