ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬರವೆಂದು ಘೋಷಿಸಿ 3 ತಿಂಗಳಾದ್ರು 1 ಬಿಡುಗಡೆಯಾಗಿಲ್ಲ: ಕಾಂಗ್ರೆಸ್ ಅಸಮಾಧಾನ

Vishwanath S
Updated On : 10 Jan 2014, 12:46 pm

ಕ.ಪ್ರ.ವಾರ್ತೆ ,  ಹಾಸನ ,  ಜ. 9
ಬರ ಸಂಬಂಧ ಹಣ ಬಿಡುಗಡೆ ಮಾಡುವ ಮತ್ತು ಅಧಿಕಾರಿಗಳು ಅದಕ್ಷತೆಯ ಕಾರ್ಯ ವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರು ಜಿಪಂ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
3 ತಿಂಗಳಾಯ್ತು 1 ರು. ಇಲ್ಲ: ಬೇಲೂರು ಕಾಂಗ್ರೆಸ್ ಶಾಸಕ ವೈ.ಎನ್. ರುದ್ರೇಶ್‌ಗೌಡರು ಮಾತನಾಡಿ, ಸ್ವಾಮಿ... ನಮ್ಮ ತಾಲೂಕನ್ನು ಬರ ಎಂದು ಡಿಕ್ಲೇರ್ ಮಾಡಿ 3 ತಿಂಗಳಾಯ್ತು. ಇನ್ನೂ ನಯಾಪೈಸೆ ಬಿಡುಗಡೆ ಮಾಡಿಲ್ಲ.
 ನನ್ನ 25 ವರ್ಷಗಳ ರಾಜಕಾರಣದಲ್ಲಿ ಬರ ಎಂದು ಘೋಷಣೆ ಮಾಡಿ ಹಲವು ತಿಂಗಳಾದರೂ ಹಣ ಬಿಡುಗಡೆ ಮಾಡದೇ ಇರುವ ಸರ್ಕಾರವನ್ನು ಕಂಡಿಲ್ಲ. ಇದು ಸರಿಯಲ್ಲ. ಶಾಸಕರ ನಿಧಿಗೆ ನೀಡುವ 1 ಕೋಟಿ ರು. ಗಳನ್ನು ಬೋರ್‌ವೆಲ್ ಕೊರೆಯಲಿಕ್ಕೆ ನೀಡಲಾಗಿದೆ. ಬೇರೆ ಅಭಿವೃದ್ಧಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ.  ಕೆ.ಬಿ. ಹಾಳ್ ಬಳಿ ಚಿಕ್ಕಮಗಳೂರು ಜಿಲ್ಲೆಯವರು, ಹಳೇಬೀಡು, ಮಾದಿಹಳ್ಳಿ, ಜಾವಗಲ್ ಹೋಬಳಿಗಳಿಗೆ ನೀರು ಒದಗಿಸುವ ಪೈಪ್ ಅನ್ನು ತಡೆದು ತಮ್ಮ ಜಿಲ್ಲೆಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಇದನ್ನು ಪೊಲೀಸ್ ಬಂದೋಬಸ್ತ್ ಮೂಲಕ ತಡೆಯಬೇಕೆಂದು ಒತ್ತಾಯಿಸಿದರು.
ನೀವೇ ಹೊಣೆ:  ಜಿಲ್ಲೆಯ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಯೋಜನೆಗಳ ಹಣ ಸಮರ್ಪಕ ರೀತಿಯಲ್ಲಿ ವೆಚ್ಚವಾಗುತ್ತಿಲ್ಲ.  ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳದಿದ್ದರೇ ಪ್ರಗತಿ ಸಾಧ್ಯವಿಲ್ಲ. ನಾವು ಜನರ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳಿಂದ ಕೆಲಸ ಮಾಡಿಸದಿದ್ದರೇ ಅದರಿಂದ ಆಗುವ ತೊಂದರೆಗಳಿಗೆ ನೀವೇ (ಉಸ್ತುವಾರಿ ಸಚಿವರು) ಹೊಣೆಯಾಗುತ್ತೀರಿ ಎಂದು ನೇರವಾಗಿ ಆರೋಪಿಸಿದರು ಅರಕಲಗೂಡು ಕಾಂಗ್ರೆಸ್ ಶಾಸಕ ಎ.ಮಂಜು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement