ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

Vishwanath S
Updated On : 11 Jan 2014, 1:22 am

ಕ.ಪ್ರ.ವಾರ್ತೆ , ರಾಮನಾಥಪುರ , ಜ. 10
ಇಲ್ಲಿನ ನೈರುದ್ಯ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪೂರ್ವಭಾವಿಯಾಗಿ ಇತ್ತೀಚೆಗೆ ಇಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಲಾಗಿತ್ತು. ಒಂದರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಯನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ಶ್ರೀನಿವಾಸ್, ಚಿತ್ರಕಲೆಗೆ ಪ್ರಾಚೀನ ಕಾಲದಿಂದಲೂ ಹೆಚ್ಚು ಮಾನ್ಯತೆ ಪಡೆದಿದ್ದು, ಇದಕ್ಕೆ ರಾಜಾ ರವಿವರ್ಮನ ಚಿತ್ರಕಲೆಗಳು ಇಂದಿಗೂ ಜೀವಂತ ಹಾಗೂ ಅವಿಸ್ಮರಣೀಯ.
ಚಿಕ್ಕಂದಿನಿಂದಲೇ ಮಕ್ಕಳನ್ನು ವಿದ್ಯೆಯ ಜೊತೆಗೆ ಈ ರೀತಿ ಕಲೆಗಳಲ್ಲಿ ಒಂದು ಅಂಗವಾಗಿರುವ ಚಿತ್ರಕಲೆಯಲ್ಲಿ ತೊಡಗಿಸಿಕೊಂಡು ಮುಂದೆ ಉತ್ತಮ ಕಲಾವಿದರಾಗಿ ಬೆಳೆಯಲು ಸಾಧ್ಯ ಹಾಗೂ ಈ ಮಕ್ಕಳಿಗೆ ಈ ರೀತಿ ಕಲಾ ಪ್ರದರ್ಶನಕ್ಕೆ ಸ್ಪೂರ್ತಿ ನೀಡಿ ಪ್ರೋತ್ಸಾಹ ತುಂಬುವ ಸಂಸ್ಥೆಗಳೊಂದಿಗೆ ಪೋಷಕರ ಪಾತ್ರ ಹೆಚ್ಚು ಮಹತ್ವವೆನಿಸುತ್ತದೆ ಎಂದರು.
ನೈರುದ್ಯ ಸಂಸ್ಥೆಯ ಕಾರ್ಯದರ್ಶಿ ಡಿ. ಪಾಂಡುರಂಗ ಮಾತನಾಡಿ, ಸಂಸ್ಥೆ ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವದ ಪೂರ್ವಭಾವಿಯಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಿರುವ ಮಕ್ಕಳು ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳನ್ನು ಚಿಕ್ಕಂದಿನಿಂದಲೇ ಅಳವಡಿಸಿಕೊಂಡು ಮುಂದೆ ದೇಶದ ಸತ್ಪ್ರಜೆಗಳಾಗಬೇಕೆಂದು ಆಶಿಸಿದರು.
ಈ ಸ್ಪರ್ಧೆಗೆ ಕೊಣನೂರು, ರಾಮನಾಥಪುರ, ನಿಲುವಾಗಿಲು, ಅಗ್ರಹಾರ, ಬಿಳಗೂಲಿ, ಶಿರದನಹಳ್ಳಿ, ರಾಮನಕೊಪ್ಪಲು, ಬೆಳವಾಡಿ, ಕೂಡಲೂರು, ಗಂಗೂರು ಗ್ರಾಮಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಭಾಗವಹಿಸಿದ್ದರು.  ಹಾಗೂ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಮನೋಜ್ ಕುಮಾರ್, ಸ್ವಾಮಿಗೌಡ, ಕೃಷ್ಣ, ಶಂಕರ್, ನಾರಾಯಣ, ಲಕ್ಷ್ಮಿ ಭರತ್, ಸುಭದ್ರ ರಮೇಶ್, ಸಾವಿತ್ರಿ ಭಟ್, ಕೆ.ಎನ್. ಶ್ರೀನಿವಾಸ್, ಸ್ಥಳೀಯ ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement