ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಿರುಪತಿಯಲ್ಲಿ ವೈಭವದ 'ಏಕಾದಶಿ'

Vishwanath S
Updated On : 12 Jan 2014, 1:13 am

ಕ.ಪ್ರ.ವಾರ್ತೆ , ಅರಸೀಕೆರೆ , ಜ.11
ಪಟ್ಟಣದ ಸಮೀಪವಿರುವ ಇತಿಹಾಸ ಪ್ರಸಿದ್ಧ ಮಾಲೇಕಲ್ ತಿರುಪತಿ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶನಿವಾರ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀಯವರಿಗೆ ವಿಷೇಶ ಅಲಂಕಾರ ಅಭಿಷೇಕ ಹಾಗೂ ನಾನಾ ವಿಧದ ಪೂಜಾ ಕೈಂಕರ್ಯಗಳು ನೆರವೇರಿದವು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ಸ್ವಾಮಿಯವರ ದರ್ಶನ ಪಡೆದು ಪುನೀತರಾದರು.
ಸಿದ್ಧರಿದ್ದ ಸಿಬ್ಬಂದಿ: ಶ್ರೀಯವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯವನ್ನು ನಾನಾ ಬಗೆಯ ಹೂಗಳಿಂದ ಶೃಂಗರಿಸಿ, ಭಕ್ತಾಧಿಗಳು ದೇವರ ದರ್ಶನ ಮಾಡಲು ಯಾವುದೇ ತೊಂದರೆ ಆಗದಂತೆ ದೇವಾಲಯ ಸಮಿತಿ, ತಹಸೀಲ್ದಾರ್, ಕಂದಾಯ ಇಲಾಖಾ ಅಧಿಕಾರಿಗಳು, ಆರಕ್ಷಕ ಸಿಬ್ಬಂದಿ ಬೆಳಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದರು.
ವಿಐಪಿಗಳ ದಂಡು: ಸುಮಾರು 25 ಸಾವಿರ ಭಕ್ತರು ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಶ್ರೀಸ್ವಾಮಿಯವರ ದರ್ಶನ ಪಡೆದು ಕೃತಾರ್ಥರಾದರು. ದರ್ಶನ ಪಡೆದವರಲ್ಲಿ ಹಾಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಮಾಜಿ ಶಾಸಕರಾದ ಕೆ.ಪಿ. ಪ್ರಭುಕುಮಾರ್. ಜಿ.ಎಸ್. ಪರಮೇಶ್ವರಪ್ಪ. ಎ.ಎಸ್. ಬಸವರಾಜ್, ತಾ.ಪಂ, ಅಧ್ಯಕ್ಷ ಶಿವಮೂರ್ತಿ,ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ಜನಪ್ರತಿನಿಧಿಗಳು ದರ್ಶನ ಪಡೆದರು.
ಮನವಿ: ಉರಿಬಿಸಿಲಿನಲ್ಲಿ ದೇವಾಲಯದ ಹೊರಗಡೆಯಿಂದ ಭಕ್ತಾದಿಗಳು ಮಕ್ಕಳೊಂದಿಗೆ ಸರದಿಯಲ್ಲಿ ಹೆಚ್ಚು ಕಾಲ ಸಾಗಿ, ದರುಶನ ಪಡೆವ ವೇಳೆಗೆ ಬಳಲುತ್ತಿದ್ದರು, ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಮತ್ತು ದೇವಾಲಯ ಸಮಿತಿ ಭಕ್ತರಿಗೆ ನೆರಳನ್ನು ಕಲ್ಪಿಸಬೇಕೆಂಬ ಮನವಿ ಹಾಗೂ ಸಲಹೆಗಳು ಭಕ್ತ ಸಮೂಹದಿಂದ ಕೇಳಿಬಂದವು.
ಸುವ್ಯವಸ್ಥೆ, ಅನ್ನಸಂತರ್ಪಣೆ: ದರ್ಶನಕ್ಕಾಗಿ ಬಂದ ಭಕ್ತರಿಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಪಟ್ಟಣದಿಂದ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬರಲು ಸಾರಿಗೆ ಸಂಸ್ಥೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement