ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೀರು ಸರಬರಾಜು ಬಂದ್ ಮಾಡಿ ಪ್ರತಿಭಟನೆ

Vishwanath S
Updated On : 15 Jan 2014, 1:01 am

ಬೇಲೂರು: ಯಗಚಿ ಜಲಾಶಯದಿಂದ ಹಾದು ಹೋಗಿರುವ ಪೈಪನ್ನು ಕೊರೆದು ಅಕ್ರಮವಾಗಿ ನೀರು ಪಡೆಯುತ್ತಿದ್ದಾರೆ ಎಂದು ಅರೋಪಿಸಿ ಚಿಕ್ಕಮಗಳೂರು ಪಟ್ಟಣಕ್ಕೆ ಸರಬರಾಜು ಅಗುತ್ತಿದ್ದ ನೀರನ್ನು ಬಂದ್ ಮಾಡುವ ಮೂಲಕ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ತಾಲೂಕಿನ ಕೆ.ಬಿ.ಹಾಳ್ ಗ್ರಾಮದ ಮೂಲಕ ಪೈಪ್‌ಲೈನ್ ಹಾದು ಹೋಗಿದ್ದು, ಈ ಗ್ರಾಮದ ಜನರು ಅಕ್ರಮವಾಗಿ ಪೈಪ್‌ಲೈನ್ ಕೊರೆದು ನೀರು ಪಡೆಯುತ್ತಿದ್ದು, ಇದರಿಂದ ಮೂಲ ಯೋಜನೆಯ ಗ್ರಾಮಗಳಿಗೆ ನೀರಿನ ವ್ಯತ್ಯಯ ಕಂಡುಬಂದಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಎಂಜಿನಿಯರ್ ಇತರೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ಅಕ್ರಮ ನೀರು ಪಡೆದಿರುವುದನ್ನು ತಪ್ಪಿಸಿ ಎಂದು ಮನವಿ ಮಾಡಿದ್ದರೂ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ.
ಈ ಸಂಬಂಧ ಶಾಸಕ ವೈ.ಎನ್.ರುದ್ರೇಶಗೌಡ ಮಾತನಾಡಿ, ಅಕ್ರಮವಾಗಿ ನೀರು ಪಡೆದಿರುವುದರಿಂದ ಈ ಭಾಗದ ಜನರು ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿಲ್ಲದೆ, ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಸರಿಪಡಿಸುವಂತೆ ಹಲವಾರು ಬಾರಿ ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಸರ್ಕಾರ ಹಾಗೂ ಮಂತ್ರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿಲ್ಲ ಎಂದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ವೈ.ಟಿ.ದಾಮೋದರ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಮುಖಂಡರಾದ ದೊರೆಯಪ್ಪ, ನಾಗರಾಜು, ನರಸಿಂಹಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement