ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ; ಕದಸಂಸ ಪ್ರತಿಭಟನೆ

Vishwanath S
Updated On : 15 Jan 2014, 1:00 am

ಕ.ಪ್ರ.ವಾರ್ತೆ ,  ರಾಮನಾಥಪುರ ,  ಜ 14
ಹಾಸನ, ಪಿರಿಯಾಪಟ್ಟಣ ಮಾರ್ಗ ಸೇರಿದಂತೆ ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸದೆ ನಿರ್ಲಕ್ಷಿಸಿರುವ ಕ್ಷೇತ್ರದ ಶಾಸಕರು ನೈತಿಕತೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಕದಸಂಸ (ಭೀಮ ವಾದ) ಸಂಘ ಪ್ರತಿಭಟನೆ ನಡೆಸಿತು.
ಪಟ್ಟಣದ ದೊಡ್ಡ ಸೇತುವೆ ಬಳಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಸ್ತೆ ಅಭಿವೃದ್ಧಿ ಕಡೆಗಣಿಸಿದ ಶಾಸಕ ಎ.ಮಂಜು ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆಯಿಂದಾಗಿ ಗಂಟೆಗಳ ಕಾಲ ಪ್ರಯಾಣಿಕರು ಪರದಾಡುವಂತಾಯಿತು.
ರಾಮನಾಥಪುರದಿಂದ ಅರಕಲಗೂಡು ಮಾರ್ಗ, ಹಾಸನಕ್ಕೆ ಬೆಟ್ಟದಪುರದ ಮಾರ್ಗವಾಗಿ ಕೇರಳಕ್ಕೆ  ಹೋಗುವ ರಸ್ತೆ, ಕೊಣನೂರು ಮಾರ್ಗವಾಗಿ ಕೊಡಗಿಗೆ ಹೋಗುವ ರಸ್ತೆ, ಕೇರಳಾಪುರದ ಮಾರ್ಗವಾಗಿ ಮೈಸೂರು, ಕಟ್ಟೇಪುರ ಮಾರ್ಗವಾಗಿ ಕುಶಾಲನಗರ ಹೋಗುವ ರಸ್ತೆ ಸೇರಿದಂತೆ ಈ ಪ್ರದೇಶದ ಮುಖ್ಯ ರಸ್ತೆಗಳು ಗುಂಡಿ ಬಿದ್ದು ವಾಹನಗಳು ಚಲಿಸಲು ಸಾಧ್ಯವಾಗದಷ್ಟು ಮಟ್ಟಿಗೆ ಹದಗೆಟ್ಟು ಸಂಚಾರ ದುಸ್ತರವಾಗಿದೆ  ಎಂದು ಆರೋಪಿಸಿದರು. ಇದಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ತಲೆ ಕೆಡಿಸಿಕೊಳ್ಳದ ಶಾಸಕರು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ತಾಲೂಕಿನ ಎಲ್ಲ ಕಡೆಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನ ಮಾಡಲಾಗುತ್ತಿದೆ. ಇಂಥ ಕೃತ್ಯಗಳನ್ನು ಎಸಗಿದವರ ವಿರುದ್ಧ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸದೇ ಸಬ್‌ಇನ್ಸ್‌ಪೆಕ್ಟರ್ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ದಲಿತ ವಿರೋಧಿ ಧೋರಣೆ ತಳೆದಿರುವ ಪಿಎಸ್‌ಐ ರಾಜುರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕದಸಂಸ (ಭೀಮವಾದ) ಸಂಘದವರು ಉಪತಹಸೀಲ್ದಾರ್ ಅಂಜನಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.  ಸಂಘದ ಜಿಲ್ಲಾ ಸಂಚಾಲಕ ಹಂಪಾಪುರ ಜವರಯ್ಯ ತಾಲೂಕು ಸಂಚಾಲಕ ರಾಮಚಂದ್ರ, ಹಾನಗಲ್ಲುಮೂರ್ತಿ, ಕೋನಾಪುರ ರಾಜಶೇಖರ್, ಬೆಟ್ಟಸೋಗೆ ಸುಬ್ಬರಾಯಿ, ಬೇಲೂರಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement