ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂಗವಿಕಲ ನೌಕರರಿಗೂ ರಿಯಾಯ್ತಿ ಬಸ್ ಪಾಸ್

Vishwanath S
Updated On : 16 Jan 2014, 1:32 am

ಹಾಸನ: ಸರ್ಕಾರಿ ಅಂಗವಿಕಲ ನೌಕರರಿಗೂ ರಿಯಾಯತಿ ದರದ ಬಸ್‌ಪಾಸ್ ಸೌಲಭ್ಯ ಪಡೆಯಲು ಸೂಚಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮತ್ತು ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ ತಿಳಿಸಿದ್ದಾರೆ.
ನಿರುದ್ಯೋಗಿ ಅಂಗವಿಕಲರಿಗೆ ನೀಡಲಾಗುವ ರಿಯಾಯತಿ ದರದ ಬಸ್‌ಪಾಸ್ ಸೌಲಭ್ಯದ ಯೋಜನೆಯನ್ನು ಸರ್ಕಾರಿ ಅಂಗವಿಕಲ ನೌಕರರೂ ಪಡೆಯುವ ಸೌಲಭ್ಯವಿದೆ. ಆದರೆ ಕೆಎಸ್‌ಆರ್‌ಟಿಸಿ  ನಿಗಮವು ಈ ಯೋಜನೆಯು ಸೌಲಭ್ಯವು ನಿರುದ್ಯೋಗ ಅಂಗವಿಕಲರಿಗೆ ಮಾತ್ರವಿದ್ದು ಸರ್ಕಾರಿ ಅಂಗವಿಕಲ ನೌಕರರ ಆದಾಯ ಮಿತಿ ಹೆಚ್ಚಿರುವುದರಿಂದ ಅವರಿಗೆ ನೀಡಲಾಗುವುದಿಲ್ಲವೆಂಬ ತಮ್ಮದೇ ಆದೇಶ ಮಾಡಿದ್ದಾರೆ. ಇಲ್ಲೀವರೆಗೂ ಬಸ್‌ಪಾಸಿನ ಸೌಲಭ್ಯವನ್ನು ಸರ್ಕಾರಿ ಅಂಗವಿಕಲ ನೌಕರರಿಗೆ ನೀಡದೆ ಅವರನ್ನು ಸೌಲಭ್ಯದಿಂದ ವಂಚಿಸಲಾಗಿತ್ತು. ಎಲ್ಲ ಅಂಗವಿಕಲರಿಗೆ ನೀಡಲಾಗುವ ಬಸ್ ಪಾಸಿನ ಸೌಲಭ್ಯ ನೀಡಲು ಕೆಎಸ್‌ಆರ್‌ಟಿಸಿ ನಿಗಮ ತಾರತಮ್ಯವೆಸಗಿದೆ. ನಮ್ಮ ಸಂಘದ ವತಿಯಿಂದ ಡಿ.28ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ನೌಕರರ ರಾಜ್ಯ ಸಮ್ಮೇಳನದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಿದಾಗ, ಕೆಲವು  ಜಿಲ್ಲೆಗಳಲ್ಲಿ ಸರ್ಕಾರಿ ಅಂಗವಿಕಲ ನೌಕರರಿಗೆ ಪಾಸ್ ನೀಡಲು ತಾರತಮ್ಯ ಮಾಡುತ್ತಿದ್ದು, ಅಂಥ ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಆದ್ದರಿಂದ ಸರ್ಕಾರಿ ಅಂಗವಿಕಲ ನೌಕರರು ಕೂಡಾ ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೋರಿದ್ದಾರೆ.
'ವಿವೇಕರ ಜೀವನಚರಿತ್ರೆ ಪಠ್ಯವಾಗಲಿ'
ಚನ್ನರಾಯಪಟ್ಟಣ: ಯುವಕರು ಸ್ವಾಮಿ ವಿವೇಕಾನಂದರ ದಿನಾಚರಣೆಯನ್ನು ಆಚರಿಸಿದರೆ  ಸಾಲದು ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಸದಸ್ಯೆ ಕುಸುಮಾ ಬಾಲಕೃಷ್ಣ ಹೇಳಿದರು. ಪಟ್ಟಣದ ಹೇಮಾವತಿ ಕಲ್ಯಾಣ ಮಂಟಪದಲ್ಲಿ ಸ್ನೇಹ ಬಳಗ ಮತ್ತು ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಯುವಕ ರಲ್ಲಿ ಆತ್ಮಸ್ಥೈರ್ಯ, ರಾಷ್ಟ್ರೀಯ ಭಾವನೆ ಬೆಳೆಸಿದ ಇವರ ಜೀವನ ಚರಿತ್ರೆಯನ್ನು ಸರ್ಕಾರ ಪಠ್ಯಕ್ರಮದಲ್ಲಿ ಅಳವಡಿಸಬೇಕೆಂದರು. ತಾ ಕಚೇರಿಯ ಮುಂಭಾಗದಲ್ಲಿ ಗಿಡ ನೆಡುವುದರ ಮೂಲಕ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಜಾಥಾಕ್ಕೆ ಚಾಲನೆ ನೀಡಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರದ ಮೆರವಣಿಗೆ ಪಟ್ಟಣ ಪ್ರಮುಖ ಬೀದಿಗಳಲ್ಲಿ ಸಾಗಿತು. ಎನ್‌ಸಿಸಿ ಕ್ಷೇತ್ರದಲ್ಲಿ ಎಸ್.ಎನ್.ನವೀನ್ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನವೀನ್ ಹಾಗೂ ಕು.ಸ್ವಾತಿ ಇಬ್ಬರಿಗೂ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳಿಗೆ ವಿವೇಕಾನಂದರ ವೇಷಭೂಷಣ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ತಾ. ದಂಡಾಧಿಕಾರಿ ಎಚ್.ಎಲ್.ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್, ಚ.ನಾ.ಅಶೋಕ್, ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ತಾ. ಕಸಾಪ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಡಾ. ಶೇಷಶಯನ, ಮೋಹನ್‌ಕುಮಾರ್ ಇದ್ದರು.
'ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ವಿವೇಕಾನಂದ'
ಚನ್ನರಾಯಪಟ್ಟಣ: ವಿದೇಶದಲ್ಲಿ ಭಾರತದ ಧರ್ಮ, ಪರಂಪರೆ ಸಂಸ್ಕೃತಿಯನ್ನು ಮೊದಲ ಬಾರಿಗೆ ಎತ್ತಿ ಹಿಡಿದ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರದ್ಯುಮ್ನ ಹೇಳಿದರು. ಇಲ್ಲಿನ ಸ್ನೇಹ ಬಳಗ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಪಟ್ಟಣದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಅವರ 151ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಮೆರಿಕದಲ್ಲಿ ಹಿಂದೂ ಧರ್ಮದ ಉದಾತ್ತ ಧ್ಯೇಯ ಧರ್ಮ ಸಹಿಷ್ಣುತೆಯ ಮಹತ್ವವನ್ನು ಸಾರಿದರು. ಯುವಕರಲ್ಲಿ ಆತ್ಮಸ್ಥೈರ್ಯ ತುಂಬಿದರು ಎಂದರು. ಜಿಪಂ ಸದಸ್ಯೆ ಕುಸುಮಾ ಬಾಲಕೃಷ್ಣ ಮಾತನಾಡಿ, ಸ್ವಾಮಿ ವಿವೇಕಾನಂದ ಅವರ ಜನ್ಮ ದಿನ ಆಚರಿಸಿದರೆ ಸಾಲದು, ಅವರ ಆದರ್ಶವನ್ನು ಯುವಕರು ಪಾಲಿಸಬೇಕು. ಯುವಶಕ್ತಿಗೆ ಚೈತನ್ಯದಾಯಕವಾಗಿರುವ ಇವರ ತತ್ವಗಳನ್ನು ಮಕ್ಕಳಿಗೆ ತಿಳಿಸಿಕೊಡುವ ದೃಷ್ಟಿಯಿಂದ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದರು. ತಹಸೀಲ್ದಾರ್ ಡಾ. ಎಚ್.ಎಲ್.ಲೋಕೇಶ್, ಉಪಾಧ್ಯಕ್ಷ ಬಿ.ಸಿ.ಬೊಮ್ಮೇಗೌಡ, ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ತಹಸೀಲ್ದಾರ್ ಸೋಮಶೇಖರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಚ್.ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ಎ.ಇ.ಧರ್ಮಪ್ಪ, ನವೋದಯ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಸಿ.ಎಸ್.ಶೇಷಶಯನ ಇದ್ದರು.
19ರಂದು ಬಿಜಿವಿಎಸ್ ಜಿಲ್ಲಾ ಸಮ್ಮೇಳನ
ಹಾಸನ: ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಜ.19ರಂದು ನಗರದ ಎಸ್‌ಜಿಆರ್ ಶಾಲಾವರಣದಲ್ಲಿ ಜಿಲ್ಲಾ ಸಮ್ಮೇಳನ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ರಾಜ್ಯ ಬಿಜಿವಿಎಸ್ ಕಾರ್ಯದರ್ಶಿ ಎಸ್.ವಜ್ರಮುನಿ ಉದ್ಘಾಟಿಸುವರು. ಸಮ್ಮೇಳನದ ಅಧ್ಯಕ್ಷತೆಯನ್ನು ಬಿಜಿವಿಎಸ್ ಜಿಲ್ಲಾಧ್ಯಕ್ಷ ಡಿ.ಅಂತೋಣಿಸ್ವಾಮಿ ವಹಿಸಲಿದ್ದಾರೆ.
ಇಂದು ಹುಣ್ಣಿಮೆ ಕಾರ್ಯಕ್ರಮ
ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಜ.16ರಂದು ಸಂಜೆ 6.30ಕ್ಕೆ ಶ್ರೀ ಮಠದ ಆವರಣದಲ್ಲಿರುವ ನವನಾಥ ಯಾಗ ಮಂಟಪದಲ್ಲಿ ಗುರು ತೋರಿದ ದಾರಿ- ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ. ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ಖ್ಯಾತ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭನ್ ಉಪನ್ಯಾಸ ನೀಡುವರು. ನಂತರ ಭಜನೆ ನಡೆಯಲಿದೆ. ಭಕ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್ ಕೋರಿದ್ದಾರೆ.
ಇಂದು ಸಾಮಾನ್ಯ ಸಭೆ
ಹಾಸನ: ಜ.4ರಂದು ನಡೆಯಬೇಕಿದ್ದ ನಗರಸಭೆಯ ಸಾಮಾನ್ಯ ಸಭೆಯ ಮುಂದೂಡಿದ ಸಭೆಯನ್ನು ಜ.16ರಂದು ಬೆಳಗ್ಗೆ 11ಕ್ಕೆ ನಗರಸಭೆಯ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಅಧ್ಯಕ್ಷೆ ಎಚ್.ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಬ್ಯೂಟಿಷಿಯನ್ ಕೌಶಲ್ಯ ತರಬೇತಿ
ಹಾಸನ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ಮತ್ತು ಸಿಡಾಕ್ ಇವರಿಂದ ಜಿಲ್ಲೆಯ ನಿರುದ್ಯೋಗಿ ಯುವತಿಯರಿಗೆ ನಾಲ್ಕು ವಾರಗಳ ಅವಧಿಯ ಕಾಸ್ಮೋಟಲಾಜಿ ಬ್ಯೂಟಿಷಿಯನ್ ವೃತ್ತಿಯಲ್ಲಿ ಕೌಶಲ್ಯ ತರಬೇತಿಯನ್ನು ಜ.27ರಿಂದ ಉಚಿತವಾಗಿ ಆಯೋಜಿಸಲಾಗಿದೆ. ಉಪ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಡೈರಿ ಸರ್ಕಲ್, ಬಿ.ಎಂ.ರಸ್ತೆ, ಹಾಸನ ಸಲ್ಲಿಸುವಂತೆ ತಿಳಿಸಿದೆ.
ಶಾಲೆಗೆ ದಾಖಲಿಸಲು ಫೆ.8 ಕೊನೆ ದಿನ
ಹಾಸನ: ಶಿಕ್ಷಣ ಹಕ್ಕು ಅಧಿನಿಯಮ ಕಾಯ್ದೆ ಜಾರಿಯಲ್ಲಿರುವುದರಿಂದ ಈ ಸಂಬಂಧ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶೇ.25ರಷ್ಟು ಸೀಟುಗಳನ್ನು ಅರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗ, ಪ.ಜಾತಿ ಮತ್ತು ಪ.ಪಂಗಡ ಹಾಗೂ ಪ್ರವರ್ಗದ ಮಕ್ಕಳಿಗೆ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ.8 ಕಡೆ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಸನ, ದೂ. 08172-267174 ಸಂಪರ್ಕಿಸಬಹುದು.
ಭಜನೆ; ಗರುಡಾದ್ರಿ ತಂಡ ಪ್ರಥಮ
ಬೇಲೂರು: ಪಟ್ಟಣದ ಪೇಟೆ ಆರ್ಯವೈಶ್ಯ ಮಂಡಳಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ತಿರುಮಲ ತಿರುಪತಿ ದೇವಾಲಯದ ದಾಸಭಾರತಿ, ದಾಸಸಾಹಿತ್ಯದಲ್ಲಿ ನೋಂದಾಯಿತರಾದ ವನಿತೆಯರ ಶ್ರೀಭಾರಿ, ಶ್ರೀವತ್ಸ ಭಜನಾ ಮಂಡಳಿಯಿಂದ ಅಂಜನಾದ್ರಿ, ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ ಹೆಸರಿನ 8 ಸದಸ್ಯರೊಳಗೊಂಡ 4 ತಂಡದ ನಡುವೆ 25 ಗೀತೆಗಳ ಭಜನ ಸ್ಪರ್ಧೆ ಏರ್ಪಡಿಸಲಾಗಿತ್ತು. ಲಕ್ಷ್ಮೀಗುರುರಾಜ್ ನೇತೃತ್ವದ ಗರುಡಾದ್ರಿ ತಂಡ ಪ್ರಥಮ ಸ್ಥಾನ, ಉಮಾಸುರೇಶ್ ಮುಖಂಡತ್ವದ ಶೇಷಾದ್ರಿ ದ್ವಿತೀಯ, ಶಾಲಿನಿ ನಾಗೇಂದ್ರ ನಾಯಕತ್ವದ ಅಂಜನಾದ್ರಿ ತೃತೀಯ, ವೀಣಾರಾಘವ್ ನೇತೃತ್ವದ ನೀಲಾದ್ರಿ ನಾಲ್ಕನೇ ಸ್ಥಾನ ಪಡೆದಿದೆ. ತೀರ್ಪುಗಾರರಾಗಿ ಕಲಾವಿದೆ ಇಂದ್ರಮ್ಮ ಹಾಗೂ ಸುಧಾ ಕಾರ್ಯ ನಿರ್ವಹಿಸಿದರು.
ಎಂಟಿಎಸ್ ಹುದ್ದೆ
ಹಾಸನ: ಅರಸೀಕೆರೆ ಅಂಚೆ ವಸ್ತು ಭಂಡಾರದಲ್ಲಿ ಎಂಟಿಎಸ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಒಟ್ಟು 4 ಹುದ್ದೆಗಳು ಖಾಲಿ ಇವೆ. ಇದಕ್ಕೆ ಸಂಬಂಧಪಟ್ಟ ಅರ್ಜಿಗಳು ಅಂಚೆ ಇಲಾಖೆಯ ವೆಬ್‌ಸೈಟ್ ಢಿಢಿಢಿ.್ಞಛ್ಠಟಿಛಡಿಛ್ಞಛಠ್ಟಡಡಿ.್ಜ್ಟಢ.್ಝಟಿ, ಢಿಢಿಢಿ.್ಝಟಿಜ್ಝಛಠ್ಟಡಡಿ.್ಜ್ಟಢ.್ಝಟಿ ನಲ್ಲಿ ಲಭ್ಯವಿರುತ್ತದೆ. ಅಭ್ಯರ್ಥಿಗಳು ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಧೀಕ್ಷಕರು, ಅಂಚೆ ವಸ್ತು ಭಂಡಾರ, ಅರಸೀಕೆರೆ-573103 ಇವರಿಗೆ ತ್ವರಿತ ಅಂಚೆ (ಡಠಜಜಜ ಠ್ಟಡಡಿ) ಮುಖಾಂತರ ಮಾತ್ರ ಸಲ್ಲಿಸುವುದು. ನಿಬಂಧನೆಗಳ ಪ್ರಕಾರವೇ ಅರ್ಜಿ ಸಲ್ಲಿಸಬೇಕೆಂದು ಅರಸೀಕೆರೆ ಅಂಚೆ ವಸ್ತು ಭಂಡಾರದ ಅಧೀಕ್ಷಕರು ತಿಳಿಸಿದ್ದಾರೆ.
ಎಚ್‌ಐವಿ ತಡೆಗೆ ಯುವಜಾಗೃತಿ ಅಗತ್ಯ
ಹಾಸನ: ಯುವ ಜನತೆಯಲ್ಲಿ ಏಡ್ಸ್ ಜಾಗೃತಿ ಮತ್ತು ರಕ್ತದಾನಕ್ಕೆ ಪ್ರೇರಣೆ ನೀಡುವಲ್ಲಿ ಶಾಲಾ- ಕಾಲೇಜುಗಳ  ರೆಡ್‌ರಿಬ್ಬನ್ ಕ್ಲಬ್‌ಗಳು ಕಾರ್ಯ ಪ್ರವೃತ್ತವಾಗಬೇಕೆಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಪಿ.ಎಲ್. ನಟರಾಜ್ ತಿಳಿಸಿದರು. ಅವರು ಬಾಲಕಿಯರ ವಿಭಜಿತ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಉದ್ಘಾಟಿಸಿ, ರಾಜ್ಯದಲ್ಲಿ ಎಚ್‌ಐವಿ ತಡೆಗಟ್ಟುವಲ್ಲಿ ಯುವಜನರ ಪಾತ್ರ ಮುಖ್ಯವಾಗಿದ್ದು, ರೋಗದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಏಡ್ಸ್‌ಪೀಡಿತರಿಗೆ ಸಾಂತ್ವಾನ ಹೇಳುವಂತಹ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಮಾದಕ ವಸ್ತುಗಳ ಸೇವನೆಗೆ ಒಳಗಾಗಿರುವವರಲ್ಲಿ ಏಡ್ಸ್ ರೋಗ ಅತಿಯಾಗಿದ್ದು ಯುವಜನರು ಕೈಜೋಡಿಸಿದರೆ ಈ ರೋಗವನ್ನು ಓಡಿಸಲು ಸಾಧ್ಯವಿದೆ ಎಂದರು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಬಿ.ಎಂ.ರವಿಕುಮಾರ್ ಮಾತನಾಡಿ, ಭಾರತದಲ್ಲಿ ಏಡ್ಸ್ ರೋಗದಲ್ಲಿ ಕರ್ನಾಟಕ 6ನೇ ಸ್ಥಾನಕ್ಕೆ ತಲುಪಿರುವುದು ಆತಂಕದ ವಿಚಾರ ಎಂದರು.
ಅಂಗವಿಕಲ ನೌಕರರಿಗೂ ರಿಯಾಯ್ತಿ ಪಾಸ್
ಹಾಸನ: ಸರ್ಕಾರಿ ಅಂಗವಿಕಲ ನೌಕರರಿಗೂ ರಿಯಾಯತಿ ದರದ ಬಸ್‌ಪಾಸ್ ಸೌಲಭ್ಯ ಪಡೆಯಲು ಸೂಚಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮತ್ತು ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ ತಿಳಿಸಿದ್ದಾರೆ.
ನಿರುದ್ಯೋಗಿ ಅಂಗವಿಕಲರಿಗೆ ನೀಡಲಾಗುವ ರಿಯಾಯತಿ ದರದ ಬಸ್‌ಪಾಸ್ ಸೌಲಭ್ಯದ ಯೋಜನೆಯನ್ನು ಸರ್ಕಾರಿ ಅಂಗವಿಕಲ ನೌಕರರೂ ಪಡೆಯುವ ಸೌಲಭ್ಯವಿದೆ. ಆದರೆ ಕೆಎಸ್‌ಆರ್‌ಟಿಸಿ  ನಿಗಮವು ಈ ಯೋಜನೆಯು ಸೌಲಭ್ಯವು ನಿರುದ್ಯೋಗ ಅಂಗವಿಕಲರಿಗೆ ಮಾತ್ರವಿದ್ದು ಸರ್ಕಾರಿ ಅಂಗವಿಕಲ ನೌಕರರ ಆದಾಯ ಮಿತಿ ಹೆಚ್ಚಿರುವುದರಿಂದ ಅವರಿಗೆ ನೀಡಲಾಗುವುದಿಲ್ಲವೆಂಬ ತಮ್ಮದೇ ಆದೇಶ ಮಾಡಿದ್ದಾರೆ. ಇಲ್ಲೀವರೆಗೂ ಬಸ್‌ಪಾಸಿನ ಸೌಲಭ್ಯವನ್ನು ಸರ್ಕಾರಿ ಅಂಗವಿಕಲ ನೌಕರರಿಗೆ ನೀಡದೆ ಅವರನ್ನು ಸೌಲಭ್ಯದಿಂದ ವಂಚಿಸಲಾಗಿತ್ತು.
ನಮ್ಮ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೌಕರರ ರಾಜ್ಯ ಸಮ್ಮೇಳನದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಿದಾಗ, ಕೆಲವು  ಜಿಲ್ಲೆಗಳಲ್ಲಿ ಸರ್ಕಾರಿ ಅಂಗವಿಕಲ ನೌಕರರಿಗೆ ಪಾಸ್ ನೀಡಲು ತಾರತಮ್ಯ ಮಾಡುತ್ತಿದ್ದು, ಅಂಥ ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಆದ್ದರಿಂದ ಸರ್ಕಾರಿ ಅಂಗವಿಕಲ ನೌಕರರು ಕೂಡಾ ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement