ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಏತ ನೀರಾವರಿಗೆ ಆಗ್ರಹಿಸಿ ಬಿಜೆಪಿ ಜಾಥಾ

Vishwanath S
Updated On : 17 Jan 2014, 1:12 am

ಚನ್ನರಾಯಪಟ್ಟಣ: ಜುಟ್ಟನಹಳ್ಳಿ ಹಾಗೂ ಹಿರೀಸಾವೆ ಏತ ನೀರಾವರಿಗೆ ಆಗ್ರಹಿಸಿ ಶ್ರವಣಬೆಳಗೊಳ ಬಿಜೆಪಿ ಘಟಕದ ವತಿಯಿಂದ ಶಾಸಕ ಸಿ.ಟಿ ರವಿ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು.
ಶ್ರವಣಬೆಳಗೊಳದ ಗ್ರಾಮ ಪಂಚಾಯಿತಿ ಕಚೇರಿ ಬಳಿಯಿಂದ ಬಿಜೆಪಿ  ಹೋಬಳಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾಲ್ನಡಿಗೆ ಕಾರ್ಯಕ್ರಮಕ್ಕೆ ಶಾಸಕ ಸಿ.ಟಿ. ರವಿ ಚಾಲನೆ ನೀಡಿದರು.
ವಿಷಾದನೀಯ: ಎರಡು ಕಿ.ಮಿ. ಕಾಲ್ನಡಿಗೆಯಲ್ಲಿ ಸಾಗಿದ ಸಿ.ಟಿ ರವಿ, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ನಾಯಕರು ಮೇರು ಮಟ್ಟಕ್ಕೆ ಬೆಳೆದಿದ್ದು, ಅವರಿಗೆ ಇಂತಹ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಅತಿಶಯವಲ್ಲ. ಆದರೂ, ಅದನ್ನು ರಾಜಕೀಯ ಬೆಳವಣಿಗೆಗೆ ಬಳಸಿಕೊಂಡಿರುವುದು ವಿಷಾದನೀಯ ಎಂದರು.
ಆರೋಪ: ಎಲ್ಲಾ ಜನಪ್ರತಿನಿಧಿಗಳು ಕೂಡ ರೈತರ ಪರ ಇದ್ದೇವೆ ಎಂದು ಹೇಳುತ್ತಾರೆ ಆದರೆ ಅವರಿಗೆ ಸಿಗಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ರೂಪುರೇಷೆ ನೀಡಬಹುದು: ಮಾಜಿ ಪ್ರಧಾನಿ ದೇವೇಗೌಡ ಅವರು ಮನಸ್ಸು ಮಾಡಿದರೆ ಇದು ಆಗಬಾರದ ಕೆಲಸವಲ್ಲ. ಆದರೆ, ಅವರಿಗೆ ಈ ಬಗ್ಗೆ ಕಾಳಜಿಯಿಲ್ಲದಿರುವುದು ಮುಖ್ಯವಾಗಿ ಕಾಣುತ್ತದೆ. ದೇವೇಗೌಡ ಅವರು ಮನಸ್ಸು ಮಾಡಿದರೆ ಇಂದೇ ಈ ಯೋಜನೆಗೆ ರೂಪುರೇಷೆ ನೀಡಬಹುದು ಎಂದು ತಿಳಿಸಿದರು.
ತಾವು ಇಂದೇ ವಿಧಾನಸೌಧದಲ್ಲಿ ಈ ಬಗ್ಗೆ ಸೂಕ್ತ ದಾಖಲೆಗಳು ಯಾವ ಮಟ್ಟದಲ್ಲಿವೆ ಎಂಬುದನ್ನು ಪರಿಶೀಲಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement