ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈಜ್ಞಾನಿಕ ಮನೋಧರ್ಮ ಬಿತ್ತಬೇಕು: ಯೋಗಾನಾಥ್

Vishwanath S
Updated On : 17 Jan 2014, 1:12 am

ಕ.ಪ್ರ.ವಾರ್ತೆ , ಹಾಸನ , ಜ.16
ಶಾಲಾ ಹಂತದಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಬಿತ್ತಿದರೆ ಮಾತ್ರ ಆ ಮಕ್ಕಳು ಮೂಢ ನಂಬಿಕೆಯಿಂದ ಮುಕ್ತವಾಗಿ ಬದುಕುವ ಹೊಸ ಸಮಾಜ ಕಟ್ಟಲು ಸಾಧ್ಯ ಎಂದು ಅರಕಲಗೂಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ  ಅಧಿಕಾರಿ ಎಸ್. ಯೋಗಾನಾಥ್ ಹೇಳಿದರು.
ಇತ್ತೀಚೆಗೆ ಅರಕಲಗೂಡು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಬಿಜಿವಿಎಸ್ ಮಾತ್ರ ದೇಶದಲ್ಲಿ ವಿಜ್ಞಾನವನ್ನು ಶಿಕ್ಷಣ, ಜನಸಾಮಾನ್ಯರು ಹಾಗೂ ಮಹಿಳೆಯರ ನಡುವೆ ಬಿತ್ತಿದೆ. ಎಲ್ಲಾ ಶಾಲಾ ಕಾಲೇಜುಗಳು ಬಿಜಿವಿಎಸ್ ಘಟಕ ಸ್ಥಾಪಿಸಿಕೊಳ್ಳುವ ಮೂಲಕ ವಿಜ್ಞಾನ ಕಲಿಕೆ ಹಾಗೂ ವಿಜ್ಞಾನ  ಪ್ರಸಾರದಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.
ಶ್ಲಾಘನೀಯ: ಪತ್ರಕರ್ತ ಜಯಕುಮಾರ್ ಮಾತನಾಡಿ, ಜನರ ವೈಯಕ್ತಿಕ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಜನತೆಯನ್ನು ಮೋಸಗೊಳಿಸುತ್ತಿರುವವರು ದೇಶದಲ್ಲಿ ವಿಪರೀತವಾಗಿದ್ದಾರೆ. ವೈಜ್ಞಾನಿಕ ಚಿಂತನೆಯನ್ನು ಬೆಳೆಸುವುದರಲ್ಲಿ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಸಮಿತಿಯನ್ನು ಪುನರ್ರಚಿಸಲಾಯಿತು ತಾಲ್ಲೂಕು ಅಧ್ಯಕ್ಷರಾಗಿ ಪೃಥ್ವಿರಾಜ್, ಉಪಾಧ್ಯಕ್ಷರಾಗಿ ಶ್ರೇಯಾಂಕ, ಕಾರ್ಯದರ್ಶಿಯಾಗಿ ಲಕ್ಷ್ಮೀಶ್, ಸಹ ಕಾರ್ಯದರ್ಶಿಯಾಗಿ ರಕ್ಷಿತ್, ಖಜಾಂಚಿಯಾಗಿ ರಾಜಮ್ಮ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ  ಸ್ಪೂರ್ತಿ, ಸೀಮಾ.ಜೆ, ವಿಶಾಲಾಕ್ಷಿ, ಸಹನಾ, ಪ್ರತಾಪ್, ಚಂದನ, ವೆಂಕಟೇಶ್ ಮತ್ತು ಆಹ್ವಾನಿತ ಸದಸ್ಯರಾಗಿ ಜಗದೀಶ್.ಬಿ.ಆರ್, ರಂಜಿತಾ, ಎಚ್. ವಿಜಯ,  ಎಸ್.ಎಸ್. ಕಾರ್ತಿಕ ಹಾಗೂ ಚೇತನ್ ಆಯ್ಕೆಯಾದರು. ಲಕ್ಷ್ಮೀಶ್ ಸ್ವಾಗತಿಸಿದರೆ, ನೂತನ  ಅಧ್ಯಕ್ಷ ಪೃಥ್ವಿರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement