ಜ್ಞಾನಾಧಾರಿತ ಶಿಕ್ಷಣ ಅಗತ್ಯ: ರಂಗನಾಥಸ್ವಾಮಿ
ಕಣಕಟ್ಟೆ (ಅರಸೀಕೆರೆ ತಾ.): ಮಕ್ಕಳಿಗೆ ಜ್ಞಾನಾಧಾರಿತ ಶಾಲಾಶಿಕ್ಷಣದ ವ್ಯವಸ್ಥೆ ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದೆ ಎಂದು ಕಡೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥಸ್ವಾಮಿ ಅಭಿಪ್ರಾಯಪಟ್ಟರು.
ಕಣಕಟ್ಟೆಯ ವಿದ್ಯಾರಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ನನ್ನ ದಿನ(ಮೈಡೇ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರಣ್ಯ ವಿದ್ಯಾ ಸಂಸ್ಥೆಯು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮವಾದ ಮೂಲಭೂತ ಸೌಲಭ್ಯವುಳ್ಳ ಮತ್ತು ಉನ್ನತ ತರಬೇತಿ ಹೊಂದಿದ ಶಿಕ್ಷಕರಿರುವ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದು ಇಲ್ಲಿನ ಜನರು ಇದರ ಸದುಪಯೋಗಪಡಿಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿಸ ಬೇಕೆಂದರು.
ವಿವೇಕಾನಂದರ ವಾಣಿಯಂತೆ ಜೀವನದಲ್ಲಿ ವ್ಯಕ್ತಿ ತನ್ನ ಕಾಲಮೇಲೆ ನಿಂತುಕೊಳ್ಳುವ ಸಾಮರ್ಥ್ಯ ನೀಡುವುದೇ ನಿಜವಾದ ಶಿಕ್ಷಣವೆಂದರು.
ಕಣಕಟ್ಟೆ ನಾಡಕಚೇರಿ ಉಪ ತಹಸೀಲ್ದಾರ್ ಸಿದ್ದರಾಜು ಮಾತನಾಡಿ ಮೌಲ್ಯವುಳ್ಳ ಶಿಕ್ಷಣವನ್ನು ನೀಡಿ ಸಮಾಜದ ಎಲ್ಲಾ ಜನಾಂಗದವರನ್ನು ಮೇಲೆತ್ತುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎ.ನಾಗೇಶ್‌ರಾವ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ದೈಹಿಕ, ಮಾನಸಿಕ, ಬೌದ್ದಿಕ ಚೇತನವನ್ನು ಹೊರತರುವುದೇ ನಿಜವಾದ ಶಿಕ್ಷಣವೆಂದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.