ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದಿಡಗ ಸುತ್ತಮುತ್ತಲು ನೀರಿನ ಸಮಸ್ಯೆ

Rashmi Kasaragodu
Updated On : 21 Jan 2014, 1:07 am

ಚನ್ನರಾಯಪಟ್ಟಣ: ತಾಲೂಕಿನ ದಿಡಗ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೂ ಹಲವಾರು ವರ್ಷಗಳಿಂದ ಸಮಸ್ಯೆ ತಲೆದೋರಿದೆ. ಪ್ಲೋರೈಡ್ ಅಂಶದಿಂದಲೂ ಆತಂಕಕಾರಿ ಹೊಂದಿರುವ ಜನರು ನೀರಿಗಾಗಿ ಜನ ಜಾನುವಾರುಗಳೊಂದಿಗೆ ಕಾರೆಹಳ್ಳಿಯ ಎಡದಂಡೆ ನಾಲೆ ವಿಭಾಗದ ಕಚೇರಿ ತನಕ ಪಾದಯಾತ್ರೆ ನಡೆಸಿದ್ದಲ್ಲದೆ ಪಟ್ಟಣದ ಕಚೇರಿಯ ಮುಂದೆಯೂ ಕಳೆದ ವರ್ಷ ಧರಣಿ ನಡೆಸಿದ್ದರು. ಇಲಾಖೆಯವರು ಕೆರೆಗಳಿಗೆ ನೀರು ತುಂಬುವ ಭರವಸೆ ಇಟ್ಟು ಸ್ಥಳ ವೀಕ್ಷಿಸಿದರೂ ಯಾವುದೇ ನೀರು ಹರಿಸದೆ ರೈತರ ಆಸೆ ಇನ್ನು ಅಧಿಕಾರಿಗಳ ಭರವಸೆಯಾಗೇ ಉಳಿದಿದೆ. ಹೇಮಾವತಿ ನಾಲೆ ನೀರು ತುಮಕೂರು ಜಿಲ್ಲೆ ಮಾದಲೂರು ಕೆರೆಗೆ ನೀರು ಕೊಡಲು ನೀರು ಹರಿಸುವ ಕೆಲಸ ಪ್ರಾರಂಭವಾಗಿದೆ, ಆದರೆ ಸ್ಥಳೀಯ  ಜನಪ್ರತಿನಿಧಿಗಳು ಇತ್ತಗಮನ ಹರಿಸದೆ ಇರುವುದರ ಬಗ್ಗೆ ಈ ಭಾಗದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement