ಬರದ ಛಾಯೆ: ಮದ್ಯ ಮಾರಾಟ ಮೇಲೂ ಪರಿಣಾಮ
ಅರಸೀಕೆರೆ: ಬರದ ಛಾಯೆ ಮದ್ಯ ಮಾರಾಟದ ಮೇಲೂ ಪರಿಣಾಮ ಬೀರಿದ್ದು, ಮದ್ಯ ಮಾರಾಟದಲ್ಲಿ ಈ ವರ್ಷ ಏರುಪೇರಾಗಿದೆ. ಕಳೆದ ವರ್ಷ 3,24,543 ಬಾಕ್ಸ್ಗಳು ಮಾರಾಟವಾಗಿದ್ದವು.
ಕಳೆದ 2013 ರಲ್ಲಿ ಇಲ್ಲಿನ ಅಬಕಾರಿ ಇಲಾಖೆ ತಾಲೂಕಿನ 457 ಗ್ರಾಮಗಳ ಗಸ್ತಿಗಾಗಿ 8 ಮಾರ್ಗಗಳನ್ನು ರಚಿಕೊಂಡು ಕಾರ್ಯಪ್ರವೃತ್ತರಾಗಿ, ಕಳ್ಳಬಟ್ಟಿಯನ್ನು ಇಲ್ಲದಂತೆ ಮಾಡುವುದರೊಂದಿಗೆ, ಪರವಾನಗಿ ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸಿ ರು. 3.96 ಲಕ್ಷ ರು ವಸೂಲು ಮಾಡಿದೆ ಎಂದು ಅಬಕಾರಿ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಕಲಬೆರಕೆ ಮತ್ತು ಕಳ್ಳಭಟ್ಟಿ ಪ್ರಕರಣಗಳು ನಡೆಯದಂತೆ ಇಲಾಖೆ ಎಚ್ಚರ ವಹಿಸಿದೆ, 2013 ರಲ್ಲಿ 47 ಅಪರಾಧ ಪ್ರಕರಣಗಳನ್ನು ಪತ್ತೆಮಾಡಲಾಗಿದ್ದು, ಪರವಾನಗಿ ಉಲ್ಲಂಘನೆ 36 ಪ್ರಕರಣಗಳು, ಅನಧಿಕೃತ ಮಾರಾಟ 10 ಪ್ರಕರಣ, ಮತ್ತು ಕಳ್ಳಭಟ್ಟಿ ಪ್ರಕರಣ ಒಂದು ಪತ್ತೆಯಾಗಿದೆ. ಈ ಸಾಧನೆಯಲ್ಲಿ ನಮ್ಮ ಸಿಬ್ಬಂದಿ ಪಾತ್ರ ಮಹತ್ತರವಾದದ್ದು ಎಂದರು.
ಸಿಬ್ಬಂದಿ ಕೊರತೆಯ ನಡುವೆಯೂ ನಿರ್ವಹಣೆಯಲ್ಲಿ ಲೋಪವಾಗದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಉತ್ತರಿಸಿದರು.