ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮನೆ ಕಳೆದುಕೊಂಡವರಿಗೆ ಪರಿಹಾರದ ಚೆಕ್ ವಿತರಣೆ

Rashmi Kasaragodu
Updated On : 21 Jan 2014, 1:07 am

ಹಾಸನ,: ಬೆಂಕಿ ಆಕಸ್ಮಿಕದಿಂದ ಮನೆಗಳನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ನಗರಸಭೆ ವತಿಯಿಂದ ರು. 20 ಸಾವಿರ ಹಾಗೂ  ಸದಸ್ಯರು ವೈಯಕ್ತಿಕವಾಗಿ ರು. 10 ಸಾವಿರ ಮೊತ್ತದ ಚೆಕ್ಕನ್ನು ಸೋಮವಾರ ವಿತರಿಸಿದರು.
ಜನವರಿ 6 ರಂದು ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ನೂರುಲ್ಲಾ ಎಂಬವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ,  ಬೆಲೆ ಬಾಳುವ ವಸ್ತು ಸೇರಿದಂತೆ ಇತರೆ ವಸ್ತುಗಳು ಸುಟ್ಟು ಹೋಗಿತ್ತು.
ಇದೇ ವಾರ್ಡ್ನ ಸದಸ್ಯೆ ಹಾಗೂ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್ ಅವರು ಪರಿಹಾರವಾಗಿ 20 ಸಾವಿರ ನೀಡಿದರೆ, 24ನೇ ವಾರ್ಡ್ನ ಪ್ರಸನ್ನಕುಮಾರ್ (ಅಪ್ಪು) ವೈಯಕ್ತಿಕವಾಗಿ ರು. 10 ಸಾವಿರ ಚೆಕ್ ನೀಡಿದರು. ನಗರಸಭೆ ಸದಸ್ಯರಾದ ಸಿ.ಎಂ. ಭಾನುಪ್ರಕಾಶ್, ಕುಮಾರ್, ಶಾರದಾಂಬ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement