ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯುವಕರ ಮಧ್ಯೆ ಘರ್ಷಣೆ

Rashmi Kasaragodu
Updated On : 21 Jan 2014, 1:09 am

ಸಕಲೇಶಪುರ: ಜಾನುವಾರು ಸಾಗಣೆ ವಿಚಾರವಾಗಿ ಯುವಕರ ಮಧ್ಯೆ ಘರ್ಷಣೆ ಸಂಭವಿಸಿದ್ದರಿಂದ ಕೆಲಕಾಲ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಆವರಣದಲ್ಲಿ ಸೋಮವಾರ ಆತಂಕದ ವಾತವಾರಣ ನಿರ್ಮಾಣವಾಗಿತ್ತು. ತಾಲೂಕಿನ ಚಿನ್ನಹಳ್ಳಿ ಗ್ರಾಮದಿಂದ ಜಾನುವಾರುಗಳನ್ನು ತುಂಬಿಕೊಂಡು ಬರುತ್ತಿದ್ದ ಆಪೆ  ಆಟೋವನ್ನು ಪಟ್ಟಣದ ಕುಶಾಲನಗರ ಬಡಾವಣೆ ಸಮೀಪ ತಡೆದ ಯುವಕರ ಗುಂಪೂಂದು ಜಾನುವಾರುಗಳು ಸಾಗಣೆಯನ್ನು ಪ್ರಶ್ನಿಸಿದ್ದರಿಂದ ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದು ಕೈಕೈಮಿಲಾಯಿಸಿದ್ದಾರೆ. ಇದರಿಂದ ಎರಡು ಬಣದ ಮೂವರು ಯುವಕರು ಗಾಯಗೊಂಡು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸುವ ಮೂಲಕ ಪರಿಸ್ಥಿತಿ ನಿಭಾಯಿಸಿದರು.
ಗಂಗಾಧರಪ್ಪಗೆ
ಶ್ರದ್ಧಾಂಜಲಿ
ಹಾಸನ: ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಸಮಾಜ ಸೇವಕ ಗಂಗಾಧರಪ್ಪ(ಈರುಳ್ಳಿ) ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಜಿಲ್ಲಾ ನೇಕಾರ ಒಕ್ಕೂಟದ ಸಭೆಯು ನಗರದ ಬನಶಂಕರಿ ಸಮುದಾಯಭವನದಲ್ಲಿ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಗಂಗಾಧರಪ್ಪ ಅವರು ಚಿಕ್ಕ ವಯಸ್ಸಿನಿಂದಲೇ ಸಮಾಜ ಸೇವೆ ಮೈಗೂಡಿಸಿಕೊಂಡು ನೇಕಾರ ಸಮುದಾಯ ಜನಾಂಗದ ಶ್ರೇಯಸ್ಸಿಗೆ ಶ್ರಮಿಸಿದ್ದು ಒಳ್ಳೆಯ ವಾಗ್ಮಿಗಳಾಗಿದ್ದಾರೆ. ಅವರ ನಿಧಿನದಿಂದ ಸಮಾಜದವರಿಗೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಶೆಟ್ಟಿ ತಿಳಿಸಿದರು.  ಕುರುಹಿನಶೆಟ್ಟಿ ಸಮಾಜದ ಹಾಗೂ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಲಕ್ಷ್ಮೀನಾರಾಯಣ, ಒಕ್ಕೂಟದ ಉಪಾಧ್ಯಕ್ಷ ರುದ್ರಪ್ಪ, ಸಂಚಾಲಕ ಶಿವಕುಮಾರ್, ಪಟ್ಟಣ್ಣ, ಜಗದೀಶ್, ವೈ.ಪಿ. ಗಂಗಾಧರಪ್ಪ, ಸಿದ್ದಪ್ಪ ಮಾತನಾಡಿದರು.
ಕ್ರೀಡೆಗಳಿಂದ ಉತ್ತಮ ಆರೋಗ್ಯ
ಆಲೂರು: ಕ್ರೀಡೆಗಳು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವುದರೊಂದಿಗೆ ಸಮಾಜದ  ಜನರನ್ನು ಬೆಸೆಯುವ ಕೆಲಸ ಮಾಡುತ್ತವೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕಾಣಿಗೆರೆ ಮಹೇಂದ್ರ ತಿಳಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ವಕೀಲರ  ಸಂಘದಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಯಾವುದೇ  ಕ್ರೀಡೆಗಳು ದೈಹಿಕ ಹಾಗೂ ಮಾನಸಿಕವಾಗಿ ನಮಗೆ ಅತ್ಯಂತ ಸಹಕಾರಿಯಾಗಿದ್ದು ಬಿಡುವಿನ ವೇಳೆಯಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement