ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತರ ಉಪವಾಸ ಸತ್ಯಾಗ್ರಹ ಅಂತ್ಯ

Rashmi Kasaragodu
Updated On : 21 Jan 2014, 1:08 am

ಅರಸೀಕೆರೆ: ಕಳೆದ 5 ದಶಕಗಳಿಂದ ಸಾಗುವಳಿ ಮಾಡಿಕೊಂಡಿದ್ದ ಜಮೀನನ್ನು ರೈತರಿಂದ ವಾಪಸ್ಪ್ಡೆಯಲು ಮುಂದಾಗಿರುವ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿ ರೈತ ಮುಖಂಡ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಹೆಬ್ಬಾರನಹಳ್ಳಿ ರೈತರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಉಪ ತಹಸೀಲ್ದಾರ್ ಪಾಲಾಕ್ಷ, ರಾಜಸ್ವ ನಿರೀಕ್ಷಕ ನಂಜುಂಡಪ್ಪ ಭೇಟಿ ನೀಡಿ, ಫೆ.5ರೊಳಗೆ ದುರಸ್ತಿ ಕಾರ್ಯ ಆರಂಭಿಸುವುದಾಗಿ ಭರವಸೆ ನೀಡಿದ ನಂತರ ಸತ್ಯಾಗ್ರಹವನ್ನು ಸೋಮವಾರ ಕೈಬಿಡಲಾಯಿತು.
ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಉಪತಹಶೀಲ್ದಾರ್ ಪಾಲಾಕ್ಷ ರೈತರನ್ನು  ಸಮಾಧಾನಪಡಿಸಿ ಫೆಬ್ರವರಿ 5ರೊಳಗೆ ತಾಲೂಕಿನ ಎಲ್ಲ ಜಮೀನುಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ರೈತರಿಗೆ ಜಮೀನು ಬಿಟ್ಟಿಕೊಡುವಂತೆ  ನೋಟಿಸ್ ನೀಡಲಾಗಿದ್ದು ಈಗ ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ದುರಸ್ತಿ ಮಾಡಿ ಅವರಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಸತ್ಯಾಗ್ರಹ ನಿರತರು  ಫೆ.5ರೊಳಗೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ  ಪುನ-  ಫೆ. 10ರಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಸತ್ಯಾಗ್ರಹದಲ್ಲಿ ಜಾಫರ್ ಶರೀಫ್,  ಪದ್ಮಮ್ಮ, ಹಾರನಹಳ್ಳಿ ಲಕ್ಕಮ್ಮ, ಗುರುಲಿಂಗಪ್ಪ, ಹಿರಿಯಣ್ಣ, ಶಭೀರ್ ಆಹಮ್ಮದ್, ಮರಿಯಣ್ಣ, ಕೃಷ್ಣಮೂರ್ತಿ ಇನ್ನಿತರ ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement