ವಿದೇಶಿ ಬೋಧನಾ ಮಟ್ಟಕ್ಕೆ ತಲುಪಿಲ್ಲ'
ಹೊಳೆನರಸೀಪುರ: ಭಾರತದಲ್ಲಿ ಅತ್ಯುತ್ತಮ ವಿದ್ಯಾಸಂಸ್ಥೆಗಳು ಹಾಗು ತರಬೇತು ಸಂಸ್ಥೆಗಳು ಇದ್ದರೂ ಇಂದಿಗೂ ವಿದೇಶಗಳ ಬೋಧನಾ ಮಟ್ಟಕ್ಕೆ ತಲುಪಲು ಸಾಧ್ಯವಿಲ್ಲವಾಗಿದೆ. ಇದಕ್ಕೆ ಆಲ್ಲಿನ ವಿದ್ಯಾಮಟ್ಟ ಅತ್ಯಂತ ಉತ್ತಮ ಗುಣಮಟ್ಟ ಹೊಂದಿರುವುದೆ ಕಾರಣವಾಗಿದೆ ಎಂದು.ಇಂಡಿಯನ್ಸೊಸೈಟಿಯ ತರಬೇತುದಾರ ಪ್ರೊ.ಶಾಮಣ್ಣ ಹೇಳಿದ್ದಾರೆ.
ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ವಾಸವಿ ಕ್ಲಬ್ನಿಂದ ನಡೆದ ಶಾಲಾ ಕಾಲೇಜುಗಳಲ್ಲಿ ಬೋಧನೆ ಎಂಬ ವಿಷಯದ ಮೇಲೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಾಸವಿಕ್ಲಬ್ ಸಹಾಯಕ ರಾಜ್ಯಪಾಲ ಎ.ಆರ್.ರವಿಕುಮಾರ್ ಇದ್ದರು. ರವಿಕೀರ್ತಿ ನಿರೂಪಿಸಿದರು.