ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹುಲ್ಲಿನ ಬಣವೆಗೆ ಕಿಡಿಗೇಡಿಗಳಿಂದ ಬೆಂಕಿ

Rashmi Kasaragodu
Updated On : 21 Jan 2014, 1:06 am

ಹಾರನಹಳ್ಳಿ: ಹಾರನಹಳ್ಳಿ ಗ್ರಾಮದಲ್ಲಿ ಹುಲ್ಲಿನ ಮೆದೆಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಜಾನುವಾರುಗಳಿಗೆ ದೊರೆಯಬೇಕಿದ್ದ ಮೇವು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
ಗ್ರಾಮದ ಜಯಣ್ಣ ತಮ್ಮ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ಇತ್ತೀಚಿಗೆ ಕಟಾವು ಮಾಡಿ ರಾಗಿ ಫಸಲು ಪಡೆದಿದ್ದರು. ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಸುಮಾರು ರು. 60 ಸಾವಿರ ನಷ್ಟ ಸಂಭವಿಸಿದೆ.
ಜಾನುವಾರುಗಳ ಬಳಕೆಗೆ ಸಂಗ್ರಹಿಸಿದ್ದ ರಾಗಿಹುಲ್ಲು ಇದಾಗಿದ್ದು ಬೆಂಕಿ ಬಿದ್ದಿರುವುದರಿಂದ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ಬರಗಾಲದ ನಡುವೆಯೂ ಸಾಲಸೋಲ ಮಾಡಿ ರಾಗಿ ಬೆಳೆದಿದ್ದ ರೈತ ಇದರಿಂದ ಕಂಗಾಲಾಗಿದ್ದಾನೆ.
ಬೆಂಕಿ ಬಿದ್ದ ಸುದ್ದಿ ತಿಳಿದು ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರ ಪ್ರಯತ್ನ ಕೂಡ ಪ್ರಯೋಜನಕ್ಕೆ ಬಾರದಂತಾಗಿದ್ದು ರೈತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳದಲ್ಲಿ ಜಮಾಯಿಸಿದ್ದ ರೈತರು ತಾಲೂಕು ಆಡಳಿತ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement