ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂಬೇಡ್ಕರ್ ಸ್ಮರಣೆ ಪ್ರತಿಯೊಬ್ಬನ ಕರ್ತವ್ಯ

Rashmi Kasaragodu
Updated On : 22 Jan 2014, 1:25 am

ಹಳೇಬೀಡು: ಸಮಾಜ ಸುಧಾರಕ ಬಿ.ಆರ್. ಅಂಬೇಡ್ಕರ್ ಸ್ಮರಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು,  ಪ್ರತಿಮೆ ನಿರ್ಮಾಣದಿಂದ ಜನ ಸಾಮಾನ್ಯರಲ್ಲಿ ಅವರ ಚಿಂತನೆಗಳು ಹರಿದಾಡುವಂತೆ ಮಾಡುವುದು ನಮ್ಮ ಕೆಲಸ ಎಂದು ಶಾಸಕ ವೈ.ಎನ್.ರುದ್ರೇಶಗೌಡ ತಿಳಿಸಿದರು.
ಅಂಬೇಡ್ಕರ್ ಕಾಲೋನಿಯಲ್ಲಿ ಅಂಬೇಡ್ಕರ್ರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಬುಧವಾರ  ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿ, ಈ ದೇಶಕ್ಕೆ ಸಂವಿಧಾನ ಕೊಟ್ಟವರು ಅಂಬೇಡ್ಕರ್ ಎಂದು ನುಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯರಾದ  ನಳಿನಾ ಶಿವ ಕುಮಾರ್, ಬಿ.ಎಸ್. ಸೋಮಶೇಖರ್, ಪೂರ್ಣಿಮಾ ಕುಮಾರ್, ಬೇಲೂರು ಪುರಸಭಾ ಸದಸ್ಯ ಎಂ.ಆರ್. ವೆಂಕಟೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ನಿಂಗಪ್ಪ, ಸಿ.ಆರ್. ಲಿಂಗಪ್ಪ (ಪ್ರೇಮಣ್ಣ) ಜಿಯಾವುಲ್ಲಾ, ಸವಿತಾ ಪ್ರಭಾಕರ್, ರಮೇಶ್, ಗಂಗಾಧರ್, ದಯಾಶಂಕರ್, ದಲಿತ ಮುಖಂಡರಾದ ನಿಂಗರಾಜು, ಹುಲಿಕೆರೆಕುಮಾರ್, ಆನಂದ್, ಭೈರೇಶ್ ಪ್ರೇಮ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement