ಪ್ರಬಂಧಕ್ಕೆ ಪುರಸ್ಕಾರ
ಹಾಸನ: ಬೆಂಳೂರಿನ ಎಂ. ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಜೆನ್ ಆ್ಯಂಡ್ ತಮೊ ಆಫ್ ಇಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಎಂಬ ರಾಷ್ಟ್ರೀಯ ಸಮಾವೇಶದಲ್ಲಿ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಇನ್ಸ್ಟ್ರುಮೆಂಟ್ ಟೆಕ್ನಾಲಜಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಸಿ. ಎಸ್. ಸುರೇಶ್ ಬಾಬು ಪ್ರಸ್ತುತಪಡಿಸಿದ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಎಂದು ಪುರಸ್ಕರಿಸಲಾಗಿದೆ.
ಕವನಗಳ ಆಹ್ವಾನ
ಹಾಸನ: ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನಾನಾ ದತ್ತಿನಿಧಿ ಬಹುಮಾನಕ್ಕಾಗಿ ಕವನಗಳನ್ನು ಆಹ್ವಾನಿಸಲಾಗಿದೆ. ಸಂಘದ ವಾರ್ಷಿಕೋತ್ಸವದಂದು ದತ್ತಿನಿಧಿ ಬಹುಮಾನಗಳನ್ನು ಫೆ.23ರಂದು ಪ್ರದಾನ ಮಾಡಲಾಗುವುದು. ಗೀತಾದೇಸಾಯಿ ದತ್ತಿನಿಧಿ, ನುಗ್ಗೇಹಳ್ಳಿ ಪಂಕಜಾ ದತ್ತಿನಿಧಿ, ಉಮಾದೇವಿ ಶಂಕರಾ ದತ್ತಿನಿಧಿ, ಡಾ.ಬ.ನ. ಸುಂದರಾ ದತ್ತಿನಿಧಿ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಉದಯೋನ್ಮುಖ ಕವಯತ್ರಿಯರು 2013ನೇ ಸಾಲಿನಲ್ಲಿ ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾಗಿರುವ ಕವನಗಳನ್ನು ಈ ಸ್ಪರ್ಧೆಗೆ ಕಳುಹಿಸುವುದು ಮತ್ತು ಹೀಗೆ ಸ್ಪರ್ಧೆಗೆ ಕವನ ಕಳುಹಿಸುವ ಕವಯತ್ರಿಯರು ಇದುವರೆಗೂ ಒಂದೂ ಕವನ ಸಂಕಲನವನ್ನು ಪ್ರಕಟಿಸಿರಬಾರದು. ಐವರು ಕವಯತ್ರಿಯರನ್ನು ದತ್ತಿನಿಧಿ ಬಹುಮಾನಕ್ಕಾಗಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ, ಡಾ. ವಸುಂಧರಾ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ, ನಂ. 222, 2ನೇ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇ, ಬಸವೇಶ್ವರನಗರ, ಬೆಂಗಳೂರು - 79, ಮೊ. 9986840477 ಸಂಪರ್ಕಿಸಬಹುದು.