ಫೆ. 16ಕ್ಕೆ ನವೋದಯ ಆಡಳಿತ ಮಂಡಳಿ ಚುನಾವಣೆ
ಚನ್ನರಾಯಪಟ್ಟಣ: ಪಟ್ಟಣದ ಸ್ವಾತಂತ್ರ್ಯ ಪೂರ್ವ ವಿದ್ಯಾ ಸಂಸ್ಥೆಯಾದ ನವೋದಯ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಗೆ ಫೆ. 16ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿ ನಿಯೋಜನೆಗೊಂಡಿರುವ ಪ್ರೊ. ಎಚ್. ಸಿದ್ದೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನವೋದಯ ವಿದ್ಯಾ ಸಂಸ್ಥೆಗೆ ಫೆ. 16ರಂದು ನಡೆಯಲಿರುವ ಚುನಾವಣೆಯಲ್ಲಿ 2083 ಮಂದಿ ಮತ ಚಲಾವಣೆ ಮಾಡಲಿದ್ದು, ಮತದಾನಕ್ಕಾಗಿ 5 ಬೂತ್ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು. 1944ರಲ್ಲಿ ಪ್ರಾರಂಭವಾದ ಸಂಸ್ಥೆಗೆ ಚುನಾವಣೆ ಮುಖೇನ ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಿದ್ದು, ಜ. 27ರಂದು ಮತದಾರರ ಪಟ್ಟಿಯನ್ನು ವಿದ್ಯಾ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.