ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೇಸ್: ತನ್ವೀರ್ ಚಾಂಪಿಯನ್

Rashmi Kasaragodu
Updated On : 22 Jan 2014, 1:26 am

ಚನ್ನರಾಯಪಟ್ಟಣ: ಚನ್ನರಾಯಪಟ್ಟಣದ ಕ್ರೀಡಾಂಗಣದಲ್ಲಿ ಸ್ಪೋಟ್ಸ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಡರ್ಟ್ ಟ್ರ್ಯಾಕ್ ರೇಸ್ನಲ್ಲಿ ಮೈಸೂರಿನ ತನ್ವೀರ್ ಚಾಂಪಿಯನ್ಶಿಪ್ ಪಡೆದುಕೊಂಡಿತು.
ಸ್ಪೋರ್ಟ್ಸ್ ಕ್ಲಬ್ ಏರ್ಪಡಿಸಿದ್ದ ಇಂಡಿಯನ್ ಓಪನ್ ಕ್ಲಾಸ್, ಎಕ್ಸಪರ್ಟ್ ಕ್ಲಾಸ್ಗಳಲ್ಲಿ ಮೈಸೂರಿನ ತನ್ವರ್ಗೂ ತುಮಕೂರಿನ ಮಧು ಸಾಟಿಯಾಗಿ ನಿಂತು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರು.
ಬಹುಮಾನ ವಿಜೇತರು: ಚನ್ನರಾಯಪಟ್ಟಣ ಸ್ಪೋರ್ಟ್ಸ್ ಕ್ಲಬ್ ಏರ್ಪಡಿಸಿದ್ದ ರಾಜ್ಯಮಟ್ಟದ ಡರ್ಟ್ ಟ್ರಾಕ್ರೇಸ್ನಲ್ಲಿ ಮೂರು ವಿಭಾಗಗಳಿಗೆ ನಡೆದ ಸ್ಪರ್ಧೆಯಲ್ಲಿ ಮೈಸೂರಿನ ತನ್ವೀರ್ ಹಾಗೂ ತುಮಕೂರಿನ ಮಧು ಎಲ್ಲರಿಗೂ ಸರಿಸಾಟಿಯಾಗಿ ನಿಂತರೆ, ಎಕ್ಸ್ಪರ್ಟ್ ಕ್ಲಾಸ್ ವಿಭಾಗದಲ್ಲಿ ತುಮಕೂರಿನ ಮಧು ಪ್ರಥಮ, ಮೈಸೂರಿನ ತನ್ವೀರ್ ದ್ವಿತೀಯ ಹಾಗೂ ನರೇಶ್ ತೃತೀಯ ಸ್ಥಾನ ಪಡೆದರು. ಇಂಡಿಯನ್ ಓಪನ್ ಕ್ಲಾಸ್ನಲ್ಲಿ ಮೈಸೂರಿನ ತನ್ವರ್, ಪ್ರಥಮ, ಬೆಂಗಳೂರಿನ ಸೋಹೈಲ್ ದ್ವಿತೀಯ ಹಾಗೂ ತುಮಕೂರಿನ ಮಧು ತೃತೀಯ  ಸ್ಥಾನ ಪಡೆದರು.  ಓಪನ್ ಕ್ಲಾಸ್ ವಿಭಾಗದಲ್ಲಿ ಮೈಸೂರಿನ ತನ್ವರ್ ಪ್ರಥಮ, ತುಮಕೂರಿನ ಮಧು ದ್ವಿತೀಯ ಹಾಗೂ ಕನಕಪುರದ ನಟರಾಜು ತೃತೀಯ ಸ್ಥಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement