ಹೋರಾಟದಿಂದ ಮಾತ್ರ ಶೋಷಿತರಿಗೆ ನ್ಯಾಯ'
ಹಾಸನ: ಪ್ರೀತಿ, ಶಾಂತಿ ಸಮಾನತೆಯ ಸಮಾಜದ ನಿರ್ಮಾಣವೇ ಚಿಕ್ಕ ಮಗಳೂರು ವಿವಿದ್ಧೋದೇಶ ಸಹಕಾರ ಸಂಘದ ಗುರಿಯೆಂದು ಸಂಸ್ಥೆಯ ನಿರ್ದೇಶಕ ಎಲಿಕ್ಸ್ ಥಾಮಸ್ ರುಜಾರಿಯೋ ಹೇಳಿದ್ದಾರೆ. ಜೀವನ ಜ್ಯೋತಿ ಒಕ್ಕೂಟದ ವಾರ್ಷಿಕ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಒಕ್ಕೂಟದಲ್ಲಿ ಇಂದು 12000 ಸಾವಿರ ಸದಸ್ಯರಿದ್ದಾರೆ. ಮಹಿಳೆಯರಲ್ಲದೆ ಪುರುಷರ ಮಕ್ಕಳ ಸ್ವ- ಸಹಾಯ ಸಂಘಗಳಿವೆ. ಎಲ್ಲಾ ಸಮಾಜದ ಬಲವರ್ಧನೆಗೆ ಸಂಘಟನೆ ಕೆಲಸ ಮಾಡುತ್ತಿದೆ ಎಂದರು. ಹನ್ನೆರಡು ಸಾವಿರ ಜನರು ಒಟ್ಟಿಗೆ ಬೀದಿಗಿಳಿದು ಹೋರಾಡಿದರೆ ಏನನ್ನಾದರೂ ಸಾಧಿಸಲು ಸಾಧ್ಯ. ದುಷ್ಟಶಕ್ತಿಗಳನ್ನು ದಮನ ಮಾಡಬಹುದು. ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸ ಬಹುದೆಂದು ತಿಳಿಸಿದರು. ಮಹಿಳೆಯರು ತಾವು ಅಭಿವೃದ್ಧಿ ಹೊಂದುವುದು ಮಾತ್ರವಲ್ಲದೆ, ಅಶಕ್ತರ ಪರವಾಗಿ ಕೆಲಸ ಮಾಡಬೇಕು ಎಂದರು. ಉತ್ತಮ ಸಂಘಟನೆಗಳಿಗೆ ಬಹುಮಾನ ವಿತರಿಸ ಲಾಯಿತು. ಜೀವನ ಜ್ಯೋತಿ ಒಕ್ಕೂಟದ ಕಾರ್ಯದರ್ಶಿ ಡಯಾನ ಹಿರೇರಾ ಒಕ್ಕೂಟದ ವರದಿ ಓದಿದರು. ಅಧ್ಯಕ್ಷೆ ಅನ್ಸಿಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಡೂರಿನ ಚಂದ್ರಕಲಾ ಸ್ವಾಗತಿಸಿದರು. ಅನಿತಾ ವಂದಿಸಿದರು.