26ರಿಂದ ಫಲಪುಷ್ಪ ಪ್ರದರ್ಶನ
ಹಾಸನ: ತೋಟಗಾರಿಕೆ ಇಲಾಖೆ, ಹಾಸನ ಜಿಲ್ಲಾ ಪಂಚಾಯ್ತಿ ಹಾಗೂ ಹೇಮಾವತಿ ತೋಟಗಾರಿಕೆ ಸಂಘದ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಗರದ ಸಿಲ್ವರ್ ಜೂಬಿಲಿ ಪಾರ್ಕ್ನಲ್ಲಿ ಜ. 26ರಂದು ಫಲಪುಷ್ಪ ಪ್ರದರ್ಶನವನ್ನು ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ನಗರದ ತೋಟಗಾರಿಕೆ ಆಸಕ್ತರು ಮನೆ ಅಂಗಳದಲ್ಲಿ ಅಲಂಕಾರಿಕ ತೋಟಗಳ ನಿರ್ವಹಣೆ, ಲಾನ್, ಗುಲಾಬಿ ತೋಟ ನಿರ್ವಹಣೆ, ತಾರಸಿ ಮೇಲೆ ಕುಂಡಗಳಲ್ಲಿ ಅಲಂಕಾರಿಕ ಗಿಡಗಳ ಹಾಗೂ ನಾನಾ ತರಕಾರಿ ಬೆಳೆದಿರುವವರ ಮನೆಗಳಿಗೆ ಜ.24 ಮತ್ತು 25ರಂದು ತೀರ್ಪುಗಾರರು ವೀಕ್ಷಣೆಗೆ ಬರಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಸಂತೆಪೇಟೆ, ಹಾಸನ ಇವರ ಕಚೇರಿ ದೂ.ಸಂಖ್ಯೆ: 08172-234995., ಮೊಬೈಲ್ ಸಂಖ್ಯೆ 8105121994ಯನ್ನು ಸಂಪರ್ಕಿಸಬಹುದು.