ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲಾ ಯುವ ಕಾಂಗ್ರೆಸ್ನಲ್ಲಿ ಭಿನ್ನಮತ ಇಲ್ಲ: ಸ್ಪಷ್ಟನೆ

Rashmi Kasaragodu
Updated On : 23 Jan 2014, 1:31 am

ಸಕಲೇಶಪುರ: ಜಿಲ್ಲಾ ಯುವ ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಕೌಡಳ್ಳಿ ಲೋಹಿತ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆ ಸ್ಪರ್ಧಾ ಮನೋಭಾವದಿಂದ ಕೂಡಿದ್ದು, ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಹಿರಿಯ ಕಾಂಗ್ರೆಸ್ ನಾಯಕರು ಹೋರಾಟ ನಡೆಸಿದ್ದಾರೆ. ಆದರೆ, ಇದನ್ನು ವಿರೋಧ ಪಕ್ಷದವರು ಭಿನ್ನಾಭಿಪ್ರಾಯ ಎಂದು ಕರೆಯುವುದು ಸರಿಯಲ್ಲ ಎಂದರು.
5 ವರ್ಷಗಳಿಂದ ತಾಲೂಕಿನ ಕುಂದು- ಕೊರತೆಗಳನ್ನು ಬಯಲಿಗೆಳೆಯವ ಮೂಲಕ ಪಕ್ಷ ಸಂಘಟನೆ ಮಾಡಲಾಗಿದೆ ಎಂದರು.
ಕರೆ: ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷವನ್ನು ಸಂಘಟಿಸಿ, ಪಕ್ಷವನ್ನು ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆಶ್ರಫ್, ಗ್ರಾಮ ಪಂಚಾಯ್ತಿ  ಸದಸ್ಯ ಸುಧಾಕರ್, ವಡ್ಡರಹಳ್ಳಿ ಅನಿಲ್, ಪ್ರವೀಣ್ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement