ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಳಿಗೆಗಳ ಬಹಿರಂಗ ಹರಾಜಿಗೆ ಮಂಜುನಾಥ್ ಆಗ್ರಹ

Rashmi Kasaragodu
Updated On : 23 Jan 2014, 1:33 am

ಚನ್ನರಾಯಪಟ್ಟಣ: ಪುರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಹೆಚ್ಚಳ ಮಾಡುವಲ್ಲಿ ತಾರತಮ್ಯ ಮಾಡದೇ ಬಹಿರಂಗವಾಗಿ ಹರಾಜು ಮಾಡಿ ವಿಲೇವಾರಿ ಮಾಡಬೇಕೆಂದು ಪುರಸಭಾ ಸದಸ್ಯ ಮಂಜುನಾಥ್ ಪುರಸಭೆಯನ್ನು ಆಗ್ರಹಿಸಿದ್ದಾರೆ.
ಆಗ್ರಹ: ಪುರಸಭಾಧ್ಯಕ್ಷ ಮಂಜಣ್ಣ ಅಧ್ಯಕ್ಷತೆಯಲ್ಲಿ ಕರೆದಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಪುರಸಭೆಗೆ ಸೇರಿದೆ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆಯಲ್ಲಿರುವವರನ್ನು ಮುಂದುವರಿಸುವುದು. ಅವರಿಂದ ಹೆಚ್ಚಿನ ಬಾಡಿಗೆ ಸಂಗ್ರಹಿಸುವ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ್ ಮಾತನಾಡಿ, ಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳನ್ನು ಬಹಿರಂಗವಾಗಿ ಹರಾಜು ಮಾಡಬೇಕು. ಇದರಿಂದ ಪುರಸಭೆಗೆ ಲಾಭ ಬರುತ್ತದೆ. ಹಿಂದಿನ ಬಾಡಿಗೆದಾರರನ್ನೇ ಮುಂದುವರಿಸುವುದಾದರೆ ಸುತ್ತಮುತ್ತ ನಡೆಯುತ್ತಿರುವ ಬಾಡಿಗೆ ಮತ್ತು ಮುಂಗಡವನ್ನು ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪುರಸಭೆಯಿಂದ ನಿಗದಿ ಮಾಡಿರುವ ಬಾಡಿಗೆ ದರ ಇಂದಿನ ಕಡಿಮೆಯಿದ್ದು, ಬಾಡಿಗೆ ದರವನ್ನು ಹೆಚ್ಚಿಸಬೇಕು ಅವರು ನೀಡದಿದ್ದರೆ ಅವುಗಳನ್ನು ತೆರವುಗೊಳಿಸಿ ಬಹಿರಂಗವಾಗಿ ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಳಿಗೆ ನೀಡಕೂಡದು: ಪುರಸಭೆಯಿಂದ ಬಾಡಿಗೆ ಪಡೆದು ಹೆಚ್ಚಿನ ಬಾಡಿಗೆಗಾಗಿ ಮೂರನೇ ವ್ಯಕ್ತಿಗೆ ಬಾಡಿಗೆ ನೀಡಿರುವ ಮಳಿಗೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹರಾಜು ಮಾಡಿ ಎಂದು ಒತ್ತಾಯಿಸಿದ ಅವರು ವಾಣಿಜ್ಯ ಮಳಿಗೆಗಳನ್ನು ಕಟ್ಟುವ ಮೊದಲೇ ಬಾಡಿಗೆ ನೀಡುವುದಾಗಿ ಭರವಸೆ ನೀಡಿ ಅವರಿಂದ 15 ಸಾವಿರ ಮುಂಗಡ ಹಣ ಪಡೆದು ಅವರಿಗೆ ಮಳಿಗೆ ನೀಡದೆ ಹಣದ ಆಸೆಗಾಗಿ ಬೇರೆಯವರಿಗೆ ಮಳಿಗೆ ನೀಡಿರುವುದು ಖಂಡನಾರ್ಹ ಕೂಡಲೇ ಅಂತಹವರಿಗೆ ಮಳಿಗೆಯನ್ನು ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಧ್ಯ ಪ್ರವೇಶಿಸಿ ಅವರನ್ನು ಖಾಲಿ ಮಾಡಿಸಿ ಅವರ ಹೊಟ್ಟೆಗೆ ಕಲ್ಲು ಹಾಕುವುದು ಬೇಡ. ಆ ಸ್ಥಳದಲ್ಲಿ ನಡೆಯುತ್ತಿರುವ ಬಾಡಿಗೆ ನಿಗದಿ ಮಾಡಿ ಅವರಿಗೆ ಅಧಿಕೃತ ಮಾಡಿಕೊಡುವಂತೆ ಸೂಚನೆ ನೀಡಿದಾಗ ಕೆಲ ಸದಸ್ಯರು ಈ ನಿಲುವಳಿಗೆ ವಿರೋಧಿಸಿ ಅನಧಿಕೃತವಾಗಿರುವ ಮಳೆಗೆಗಳನ್ನು ತೆರವುಗೊಳಿಸಿ ಹರಾಜು ಮಾಡುವುದೇ ಸೂಕ್ತ ಎಂದು ಸಲಹೆ ನೀಡಿದರು.
ಮನೆಯೊಂದಕ್ಕೆ 15 ರು. ದರ ಸರ್ಕಾರ ನಿಗದಿ ಮಾಡಿದ್ದರೆ, ಮಾಸಿಕ 20 ರು.ಗಳನ್ನು ಪ್ರತಿ ಮನೆಯಿಂದ ಕಂದಾಯ ರೂಪದಲ್ಲಿ ಸಂಗ್ರಹಿಸಲು ಮುಂದಾಗಿರುವುದು ತಪ್ಪಾಗಿದೆ. ಈ ಬಗ್ಗೆ ಜಿಲ್ಲಧಿಕಾರಿಗಳು ಗಮನ ಹರಿಸುವಂತೆ ಪತ್ರ ಬರೆಯಲಾಗುವುದು. ಎಂದು  ಪ್ರಕಾಶ್ ಒತ್ತಾಯಿಸಿದಾಗ ನವೀನ್ಸಾಥಥ್ನೀಡಿ ಕುವೆಂಪು ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಬೀದಿಯ ಕೊನೆ ಭಾಗಕ್ಕೆ ಆಟೋಗಳು ಹೋಗಿ ಕಸ ಸಂಗ್ರಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement