ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು: ಶಾಹಿದಾ
ಅರಕಲಗೂಡು: ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಸ್ವ ಉದ್ಯೋಗಗಳತ್ತ ಗಮನಹರಿಸುವ ಜೊತೆಗೆ ಪುರುಷರ ಮೇಲಿನ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಸಮಾಜ ಸೇವಕಿ ಶಾಹಿದಾ ಬಾನು ತಿಳಿಸಿದ್ದಾರೆ.
ಅವರು ಪಟ್ಟಣದ ಕೊಂಡಯ್ಯ ಶ್ರೇಷ್ಠಿ ಕಲ್ಯಾಣ ಮಂಟಪದಲ್ಲಿ ಇಲ್ಲಿನ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರಿಗಾಗಿ ಆಯೋಜಿಸಿದ್ದ ಶೃಂಗಾರ ಕಲೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರು ಇಂದಿನ ದಿನಗಳಲ್ಲಿ ಸ್ವ ಉದ್ಯೋಗದ ಬಗ್ಗೆ ಗಮನವನ್ನು ಕೊಡುವುದು ಹಾಗೂ ಕುಟುಂಬದ ನಿರ್ವಹಣೆ ಹಾಗೂ ಪುರುಷರ ಮೇಲಿನ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಣುಕಾ, ವಲಯದ ಮೇಲ್ವಿಚಾರಕರಾದ ವಾರಿಜಾ ವಿ. ಶೆಟ್ಟಿ, ಆಂತರಿಕ ಲೆಕ್ಕ ಪರಿಶೋಧಕಿ ಮೂಕಾಂಬಿಕಾ ,ಮೇಲ್ವಿಚಾರಕಿ ಶ್ವೇತಾ, ಸೇವಾಪ್ರತಿನಿಧಿ ಗಾಯತ್ರಿ, ಲಕ್ಷ್ಮಿ ಹಾಗೂ ಇತರರು ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಸೇವಾ ಪ್ರತಿನಿಧಿ ಲಕ್ಷ್ಮಿ ನಡೆಸಿಕೊಟ್ಟರೆ, ವಸಂತಕುಮಾರಿ ಸ್ವಾಗತಿಸಿದರು. ಗಾಯತ್ರಿ ವಂದಿಸಿದರು.