ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಕುಂಭಾಭಿಷೇಕ
ಜಾವಗಲ್: ಪಟ್ಟಣದ ಇತಿಹಾಸ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವಿಮಾನ ಗೋಪುರ ನವೀಕರಣ, ಮಹಾ ಸಂಪ್ರೋಕ್ಷಣೆ, ಮಹಾ ಕುಂಭಾಭಿಷೇಕ ಮಹೋತ್ಸವ ಮತ್ತು ನರಸಿಂಹ ಹೋಮ ಜ.31ರಿಂದ ಫೆ.3ರವರೆಗೆ ನಡೆಯಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಾವಗಲ್ ವಸಂತ ಕುಮಾರ್ ತಿಳಿಸಿದ್ದಾರೆ.
ಜ.31ರ ಸಂಜೆ ನೂತನ ಕುಂಭಗಳಿಗೆ ಜೀವ ಕಳಾವಾಹನೆ ಕುಂಭ ಸ್ಥಾಪನೆ, ನಡೆಯಲಿದೆ. ಫೆ.1ರಂದು ಬೆಳಗ್ಗೆ ಚತುರ್ದಶ ಕಳಸ ಸ್ಥಾಪನೆ. ಅಧಿವಾಸ, ಪಂಚದ್ರವ್ಯಾಧಿವಾಸ, ಕ್ಷೀರಾಧಿವಾಸ, ಜಲಾಧಿವಾಸ ನಡೆಯಲಿದೆ. 3ರಂದು ಬೆಳಗ್ಗೆ ಲಕ್ಷ್ಮೀ ನರಸಿಂಹ ಹೋಮ ನಡೆಯಲಿದೆ.