28ರಿಂದ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಸಂಪರ್ಕ ಕಾರ್ಯಕ್ರಮ
ಹಾಸನ: ಮೈಸೂರು ಮುಕ್ತ ಗಂಗೋತ್ರಿಯ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ 2013-14ನೇ ಸಾಲಿನಲ್ಲಿ ಕನ್ನಡ, ಇಂಗ್ಲೀಷ್, ಸಮಾಜಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ(ಎಂ.ಕಾಂ) ವಿಷಯಗಳಿಗೆ ಪ್ರವೇಶಾತಿ ಪಡೆದಿರುವ ಪ್ರಥಮ ಮತ್ತು ಅಂತಿಮ ಎಂ.ಎ, ಎಂ.ಕಾಂನ ವಿದ್ಯಾರ್ಥಿಗಳಿಗೆ ಜ.28 ರಿಂದ ಫೆ. 1ರವರೆಗೆ ಹಾಸನದ ಭೀಮಗೋಲ್ಡ್ ಶೋ ರೂಂ ಪಕ್ಕದಲ್ಲಿ ಇರುವ ಬಿ.ಇ.ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ 5 ದಿನದ ಸಂಪರ್ಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಕಚೇರಿ ದೂರವಾಣಿ ಸಂಖ್ಯೆ: 08172-269244.