ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಅವಳ ಮುಖಗಳು ಕೃತಿ ಬಿಡುಗಡೆ

Rashmi Kasaragodu
Updated On : 24 Jan 2014, 1:42 am

ಹಾಸನ: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಹಾಗೂ ಫಿರ್ದೋಸ್ ಮಹಿಳಾ ಸಮಾಜದ ವತಿಯಿಂದ ಜ. 24ರಂದು ಬೆಳಗ್ಗೆ 10ಕ್ಕೆ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ನಡೆಯಲಿರುವ ಸಾಹಿತ್ಯ ವಿಮರ್ಶೆ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅವರ ಅವಳ ಮುಖಗಳು ಕೃತಿಯನ್ನು ಖ್ಯಾತ ಸಾಹಿತಿ  ಡಾ. ಮಳಲಿ ವಸಂತಕುಮಾರ್ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ. ಹೆಚ್.ಎನ್. ರೂಪ್ ರಾಜ್ ಚಂದನ್ ವಹಿಸುವರು. ಜಿ.ಎಸ್. ಭಟ್ ಸಾಹಿತ್ಯ ವಿಮರ್ಶೆ ಕುರಿತು ಉಪನ್ಯಾಸ ಮಾಡುವರು. ಮುಖ್ಯ ಅತಿಥಿಗಳಾಗಿ ಗುರುರಾಜ್, ಕೊಟ್ರೇಶ್ ಎಸ್. ಉಪ್ಪಾರ್, ಗೊರೂರು ಅನಂತರಾಜು, ತಿ. ರಾಮಕೃಷ್ಣಯ್ಯ , ಎಚ್.ಎಂ. ನೂರಿ, ಅಕ್ತರ್ ಜಾನ್ ಮುಂತಾದವರು ಭಾಗವಹಿಸಲಿದ್ದಾರೆ. ಕೃತಿ ಬಿಡುಗಡೆ ನಿಮಿತ್ತ ವಿದ್ಯಾರ್ಥಿನಿಯರಿಗಾಗಿ ರಂಗೋಲಿ ಹಾಗೂ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement