ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚೆಸ್ಕಾಂ ನಿರ್ಲಕ್ಷ್ಯ: ಆನೆಗುಂಡಿಯಲ್ಲಿ ನೀರಿಗೆ ಹಾಹಾಕಾರ

Rashmi Kasaragodu
Updated On : 24 Jan 2014, 2:07 am

ಕ.ಪ್ರ.ವಾರ್ತೆ    ಸಕಲೇಶಪುರ    ಜ. 23
ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಇಲಾಖೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸಬೇಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
2011-12 ನೇ ಸಾಲಿನಲ್ಲಿ ಗ್ರಾಮದ ಕುಡಿಯುವ ನೀರಿಗಾಗಿ ಜಿ.ಪಂನಿಂದ ತೆರೆದ ಬಾವಿ ನಿರ್ಮಿಸಿ, ಪೈಪ್ಲೈನ್ ಆಳವಡಿಸಿದ್ದು ಮೋಟರ್ ಸಹ ಜೋಡಿಸಲಾಗಿದೆ. ಆದರೆ ಇದಕ್ಕೆ ಅಗತ್ಯವಿರುವ ವಿದ್ಯುತ್ ಸಂಪರ್ಕವಿಲ್ಲದೇ ಕಾರಣ ಗ್ರಾಮದ ಜನತೆ ದೂರದಿಂದ ನೀರು ತರಬೇಕಾಗಿದೆ.
ಗ್ರಾಮದಲ್ಲಿ ಬಹುತೇಕ ಮದ್ಯಮ ವರ್ಗದ ಜನರಿದ್ದು, ಜಮೀನಿನ ಕೆಲಸ ಮಾಡಿದ ನಂತರ ಕುಡಿಯುವ ನೀರು ತರಲು ಹೋಗಬೇಕಾಗಿದೆ. ಆದರೆ, ಕಾಡಾನೆ ಹಾವಳಿ ಹೆಚ್ಚಿರುವ ಗ್ರಾಮದಲ್ಲಿ ಕತ್ತಲಾದ ನಂತರ ನೀರು ತರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಚೆಸ್ಕಾಂ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ತಂದ ಪರಿಣಾಮ ಕಳೆದ ಎರಡು ವರ್ಷಗಳ ಹಿಂದೆ ಗ್ರಾಮಕ್ಕೆ ವಿದ್ಯುತ್ ಕಂಬಗಳನ್ನು ತಂದುಹಾಕಲಾಗಿದೆ.
ಎಚ್ಚರಿಕೆ: ಆದರೆ, ಇದುವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇನ್ನೊಂದು ವಾರದಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಯಸಳೂರು ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement