ಪಡಿತರ ಚೀಟಿ ನವೀಕರಣಕ್ಕೆ ಫೆ. 15 ಕೊನೆ ದಿನ
ಸಕಲೇಶಪುರ: ತಾಲೂಕಿನಲ್ಲಿ 2010 ಕ್ಕೂ ಮುನ್ನ ಅಂತ್ಯೋದಯ, ಅನ್ನಯೋಜನೆ ಹಾಗೂ ಬಿಪಿಎಲ್ ಅಕ್ಷಯ ಮತ್ತು ಎ.ಪಿ.ಎಲ್ ಶಾಶ್ವಾತ ಪಡಿತರ ಚೀಟಿಯನ್ನು ಹೊಂದಿರುವವರು ಪಡಿತರ ಚೀಟಿಗಳನ್ನು ನವೀಕರಿಸಲು ಹಾಗೂ ಭಾವಚಿತ್ರ ತೆಗೆಸಿಕೊಳ್ಳಲು ಫೆ.15 ಕೊನೆ ದಿನವಾಗಿದೆ ಎಂದು ತಹಸೀಲ್ದಾರ್ ಪಾರ್ವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧಕ್ಕೆ ಪುರಸ್ಕಾರ
ಹಾಸನ: ಬೆಂಗಳೂರಿನ ಎಂ.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇತ್ತೀಚೆಗೆ ನಡೆದ ಜೆನ್ ಆ್ಯಂಡ್ ತಾಮೊ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನೀಯರಿಂಗ್ ರಾಷ್ಟ್ರೀಯ ಸಮಾವೇಶದಲ್ಲಿ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಿ. ಎಸ್. ಸುರೇಶ್ ಬಾಬು ಪ್ರಸ್ತುತ ಪಡಿಸಿದ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಪುರಸ್ಕಾರ ಸಿಕ್ಕಿದೆ.