ಫೆ.10ರಿಂದ ಸೇನಾ ನೇಮಕಾತಿ ರ್ಯಾಲಿ
ಹಾಸನ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಫೆ.10 ರಿಂದ ಫೆ. 17 ರವರೆಗೆ ಭಾರತೀಯ ಸೇನೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ, ಟಿಕ್ನಿಕಲ್, ಕ್ಲರಿಕಲ್, ಎಸ್.ಕೆ.ಟಿ, ನರ್ಸಿಂಗ್ ಅಸಿಸ್ಟೆಂಟ್, ಟ್ರೇಡ್ಮೆನ್ ಹಾಗೂ ಡಿ.ಎಸ್.ಸಿ ಹುದ್ದೆಗಳ ನೇಮಕಾತಿ ರ್ಯಾಲಿಯು ನಡೆಯಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಮತ್ತು ಪದವಿ(ಬಿ.ಎಸ್ಸಿ) ಪಡೆದಿರುವ ಅರ್ಹ ಅಭ್ಯರ್ಥಿಗಳ ವಯೋವುತಿ 17ರಿಂದ 21 ವರ್ಷ ಮತ್ತು 17ರಿಂದ 23 ವರ್ಷಗಳು ಇರಬೇಕು. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08172-268374 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯ ಬಹುದಾಗಿದೆ.