ಮಟ್ಕಾ ಆರೋಪಿಗಳ ಬಂಧನ
ಸಕಲೇಶಪುರ: ಪಟ್ಟಣದ ಅಲ್- ಅಮೀನ್ ಶಾಲೆಯ ಸಮೀಪ ಮಟ್ಕಾ ಆಡಿಸುತ್ತಿದ್ದ ಓರ್ವ ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆದಿದೆ. ಬಸವರಾಜ್ ಬಂಧಿತ ಆರೋಪಿಯಾಗಿದ್ದಾನೆ. ಸಾರ್ವಜನಿಕರಿಂದ ರು. 10ಗೆ, ರು. 70 ಹಾಗೂ ರು. 100ಗೆ ರು. 700 ಕೊಡುವ ಭರವಸೆ ನೀಡಿ ಮಟ್ಕಾ ನಡೆಸಲಾಗುತ್ತಿತ್ತು.
ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಪಟ್ಟಣ ಠಾಣೆ ಪಿ.ಎಸ್.ಐ ಜೀವನ್ ಆರೋಪಿಯನ್ನು ಬಂದಿಸಿ 6 ಮಟ್ಕಾ ಚೀಟಿ ಸಂಗ್ರಹಿಸಿಟ್ಟಿದ್ದ ಹಣ ರು. 7,260 ವಶಪಡಿಸಿಕೊಂಡಿದ್ದು ಮತ್ತೋರ್ವ ಆರೋಪಿ ಬಾಬಾಖಾನ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ