ರಾಷ್ಟ್ರೀಯ ಬ್ಯಾಂಕ್ಗಳು ನಿರೀಕ್ಷಿತವಾಗಿ ಸ್ಪಂದಿಸುತ್ತಿಲ್ಲ'
ಹಾಸನ: ಲೀಡ್ ಬ್ಯಾಂಕ್ನ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯು ಗುರುವಾರ ನಡೆಯಿತು.
ನಗರದ ಜಿಲ್ಲಾಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಬಾರ್ಡ್ನಿಂದ ದೊರೆಯುವಂತಹ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವ ಬಗ್ಗೆ, ಹಿಂದಿನ ಯೋಜನೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಗಿಯುತು. ಜೊತೆಗೆ ಕೆಲ ರಾಷ್ಟ್ರೀಯ ಬ್ಯಾಂಕ್ಗಳು ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ ಎಜಿಎಂ ಪಾರ್ವತಿ ಶರ್ಮಾ, ನಬಾರ್ಡ್ನ ಎಜಿಎಂ ಮಂಗಳ ಜ್ಯೋಷಿ, ಲೀಡ್ ಬ್ಯಾಂಕ್ನ ರೀಜನಲ್ ಮ್ಯಾನೇಜರ್ ಸುಲೇಮಾನ್ ಹಾಗೂ ನಾನಾ ಬ್ಯಾಂಕ್ಗಳ ಅಧಿಕಾರಿಗಳು ಇದ್ದರು.