ಹುಲ್ಲಿನ ಮೆದೆ ಬೆಂಕಿಗಾಹುತಿ
ರಾಮನಾಥಪುರ: ಸಮೀಪದ ಸರಗೂರು ಗ್ರಾಮದ ವಾಸಿ ಜಗದೀಶಾಚಾರ್ ಎಂಬುವರಿಗೆ ಸೇರಿದ 1.4 ಎಕರೆ ಗದ್ದೆಯ 35 ಸಾವಿರ ರು. ಮೌಲ್ಯದ ಬತ್ತದ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ಬತ್ತ ಮತ್ತು ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಕೃಷಿಯಲ್ಲಿ ಕೈಸಾಲ ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂಬ ದುಸ್ಥಿತಿ ಜಗದೀಶಾಚಾರ್ ಅವರದ್ದಾಗಿದ್ದು, ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಸೋಮಣ್ಣ, ಗ್ರಾಮ ಲೆಕ್ಕಿಗ ವಸಂತಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು ಮತ್ತು ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿಯನ್ನು ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೊಣನೂರು ಹೋಬಳಿ ರೈತಸಂಘದ ಅಧ್ಯಕ್ಷ ಅಣ್ಣಪ್ಪ, ಸಂಘಟನೆಯ ಸ್ವಾಮಿಗೌಡ, ಸ್ಥಳೀಯರಾದ ಶಾಂತಮ್ಮ, ಪಾರ್ವತಮ್ಮ, ಎಸ್.ಆರ್. ಜಗದೀಶ್ ಇದ್ದರು.