31ರಿಂದ ಲಕ್ಷ್ಮೀ ನರಸಿಂಹಸ್ವಾಮಿ ಮಹೋತ್ಸವ
ಜಾವಗಲ್: ಜಾವಗಲ್ನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವಿಮಾನ ಗೋಪುರ ನವೀಕರಣ, ಮಹಾ ಸಂಪ್ರೋಕ್ಷಣೆ, ಮಹಾ ಕುಂಭಾಭಿಷೇಕ ಮಹೋತ್ಸವ ಮತ್ತು ನರಸಿಂಹ ಹೋಮ ಜ. 31ರಿಂದ ಫೆಬ್ರವರಿ 3 ರವರೆಗೆ ನಡೆಯಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಾವಗಲ್ ವಸಂತ ಕುಮಾರ್ ತಿಳಿಸಿದ್ದಾರೆ.
ಜ. 31ರ ಸಂಜೆ ನೂತನ ಕುಂಭಗಳಿಗೆ ಜೀವ ಕಳಾವಾಹನೆ ಕುಂಭ ಸ್ಥಾಪನೆ, ನಡೆಯಲಿದೆ. ಫೆ. 1ರಂದು ಬೆಳಗ್ಗೆ ಚತುರ್ದಶ ಕಳಶ ಸ್ಥಾಪನೆ. ಆಧಿವಾಸ, ಪಂಚದ್ರವ್ಯಾಧಿವಾಸ, ಕ್ಷೀರಾಧಿವಾಸ, ಜಲಾಧಿವಾಸ ನಡೆಯಲಿದೆ. ಸಂಜೆ ವಿಷ್ಣು ಪಾರಮಾತ್ಮಿಕ ಹೋಮ 108 ಕಮಲ ಪುಷ್ಪಗಳಿಂದ ಪೌಂಡರಿಕಾಗ್ನಿಯಲ್ಲಿ ಸರ್ವದೇವತಾ ಗಾಯತ್ರಿ ಹೋಮ, ವಿಮಾನ ಗೋಪುರ, ಗ್ರಾಮ ಪ್ರದಕ್ಷಿಣೆ ಮೆರವಣಿಗೆ ನಡೆಯಲಿದೆ.
ಫೆ. 2ರಂದು ಬೆಳಗ್ಗೆ ಮಹಾಕುಂಭಾಭಿಷೇಕ, ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯಲಿದೆ. ಫೆ.3ರಂದು ಬೆಳಗ್ಗೆ ಲಕ್ಷ್ಮೀ ನರಸಿಂಹ ಹೋಮ ನಡೆಯಲಿದೆ.