ಇಂದು ಕಾಲೇಜು ಕ್ರೀಡಾ ದಿನಾಚರಣೆ
ಹಾಸನ: ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಜ. 25 ರಂದು ಬೆಳಗ್ಗೆ 10ಕ್ಕೆ 2013-14ನೇ ಸಾಲಿನ ಕಾಲೇಜು ಕ್ರೀಡಾ ದಿನಾಚರಣೆ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ. ಕುಲಕರ್ಣಿ ಉದ್ಘಾಟಿಸುವರು. ಎಂಟಿಇಎಸ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸುವರು. ಡಿಡಿಪಿಐ ಎನ್. ರಾಜಮ್ಮ ಬಹುಮಾನ ಹಾಗೂ ಅಮೋಘ್ ವಾಹಿನಿ ವ್ಯವಸ್ಥಾಪಕ ಕೆ.ಪಿ. ಸತ್ಯಪ್ರಮೋದ್ ಬಹುಮಾನ ವಿತರಿಸುವರು.
ಇಂದು ತರುಣ ಸಂಗಮ
ಹಾಸನ: ನರೇಂದ್ರ ಮೋದಿಯನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ನಮೋ ಬ್ರಿಗೇಡ್ ವತಿಯಿಂದ ಜ. 25ರಂದು ಸಂಜೆ 5.30ಕ್ಕೆ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತರುಣ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಅವರು ಭಾಷಣದ ಮೂಲಕ ಜಾಗೃತಿ ಮೂಡಿಸಲಿದ್ದಾರೆ.