ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾನಾ ಬೇಡಿಕೆ ಈಡೇರಿಸಲು ಅತಿಥಿ ಉಪನ್ಯಾಸಕರ ಆಗ್ರಹ

Rashmi Kasaragodu
Updated On : 25 Jan 2014, 1:39 am

ಆಲೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ವೇತನ ಹೆಚ್ಚಳ, ಪ್ರತಿತಿಂಗಳು ವೇತನ ನೀಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನೆಡೆಸಿದರು.
ನಂತರ ತಹಸಿಲ್ದಾರ್ ಕಚೇರಿಗೆ ತೆರಳಿ, ಉಪತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಉಪನ್ಯಾಸಕರು, 2005ರ ಆಗಸ್ಟ್ 3ರಂದು ಸಂದರ್ಶನ ನೆಡೆಸಿ ಕರ್ನಾಟಕ ಲೋಕಸೇವಾ ಆಯೋಗದ ನಿಯಮಾವಳಿಯಂತೆ ನಮ್ಮನ್ನು ಆಯ್ಕೆ ಮಾಡಲಾಗಿದೆ. ನಮ್ಮ ಭೋದನಾ ಸೇವೆಯನ್ನು ಸರ್ಕಾರ ಸಂದರ್ಭಕ್ಕನುಸಾರವಾಗಿ ಬಳಸಿಕೊಳ್ಳುತ್ತಿದೆ. ನಮ್ಮ ಸ್ಥಿತಿ ದಯನೀಯವಾಗಿದೆ ಎಂದು ಅಲವತ್ತುಕೊಂಡರು.
ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಬದಲಾವಣೆ ಮಾಡುತ್ಥಿದ್ದು, ಈ ಹಿಂದೆ ಸೇವೆ ಸಲ್ಲಿಸಿದ ಹಿರಿಯ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡದೆ. ನಮಗಿರುವ ಬದುಕುವ ಹಕ್ಕನ್ನು ಕಸಿಯಲಾಗುತ್ತಿದೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿ ತಿಂಗಳಿಗೆ ರು. 10 ಸಾವಿರ, ರು. 8 ಸಾವಿರ ಗೌರವ ವೇತನವನ್ನು ವರ್ಷದ ಕೊನೆಯಲ್ಲಿ ನೀಡುತ್ತಾ ಬಂದಿದೆ. ಇದರಿಂದ ಜೀವನ ನಡೆಸುವು ತುಂಬಾ ದುಸ್ತರವಾಗಿದೆ.
ಅಲ್ಲದೇ, ಇದರ ಜೊತೆಗೆ ಒಂದೇ ಕಾಲೇಜಿನಲ್ಲಿ ಕೆಲಸ ನಿರ್ವಹಿಸಬೇಕೆಂಬ ಆದೇಶ ಹೊರಡಿಸಿರುವುದರಿಂದ ಕೊಡುವ ಅಲ್ಪಗೌರವ ಧನದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ವಿವರಿಸಿದರು. ಪ್ರತಿಭಟನೆಯಲ್ಲಿ ಕಲ್ಪನ, ವನಜಾಕ್ಷಿ, ರಶ್ಮಿ, ಬಿಂದು, ಕಮಲಾಕ್ಷಿ, ಚಿದಾನಂದ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement