ಸುಭಾಷ್ ಚಂದ್ರ ಜನ್ಮ ದಿನಾಚರಣೆ
ಜಾವಗಲ್: ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಮಜಲುಗಳು ಅತ್ಯಂತ ರೋಚಕವೂ, ಸುದೀರ್ಘವೂ ಆದ ಪ್ರಕ್ರಿಯೆಯಾಗಿತ್ತು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಯೋಗೀಶ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ಸುಭಾಷ್ ಚಂದ್ರಬೋಸ್ ಅವರ ಜನ್ಮ ದಿನ ಆಚರಿಸಿ ಮಾತನಾಡಿದರು. ಶಿಕ್ಷಕ ಮರುಳ ಸಿದ್ದಪ್ಪ ಮಾತನಾಡಿದರು. ಶಿಕ್ಷಕರಾದ ರಾಮಲಿಂಗಯಯ್ಯ, ಪುಟ್ಟಶಂಕರಪ್ಪ, ಸವಿತಾ, ವಿದ್ಯಾ, ಸುನಂದಾ ಜಯಲಕ್ಷ್ಮಿ ರುದ್ರುಯ್ಯ ದಿಂಗಾಲಿ ಇದ್ದರು.