28ರಂದು ಒಂದು ದಿನದ ರಾಜ್ಯಮಟ್ಟದ ವಿಚಾರಗೋಷ್ಠಿ
ಹಾಸನ: ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ತಿನ ಸಹಕಾರ ಸಂಘಗಳ ಕುರಿತಾದ ಒಂದು ದಿನದ ರಾಜ್ಯಮಟ್ಟದ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಜ. 28ರಂದು ಬೆಳಗ್ಗೆ 10.30ಕ್ಕೆ ಹಾಸನದ ಎಚ್ಡಿಸಿಸಿ ಬ್ಯಾಂಕಿನ ಎಚ್.ಡಿ. ದೇವೇಗೌಡ ರೈತ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆಯ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಸಹಕಾರ ಸಂಘಗಳಲ್ಲಿ ತೆರಿಗೆ ವಿಚಾರವಾಗಿ ವಿಚಾರಗೋಷ್ಠಿಯನ್ನು ತಜ್ಞ ಉಪನ್ಯಾಸಕರಿಂದ ಏರ್ಪಡಿಸಲಾಗಿದೆ. ಜಿಲ್ಲಾ ಸಹಕಾರ ಒಕ್ಕೂಟ ಏರ್ಪಾಟು ಮಾಡಿರುವ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಂದು ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ತಪ್ಪದೆ ಭಾಗವಹಿಸಲು ಕೋರಲಾಗಿದೆ.