ಬಾಲನ್ಯಾಯ ಕಾಯ್ದೆ ಅನುಷ್ಠಾನ, ರಕ್ಷಣಾ ಯೋಜನೆ ಕಾರ್ಯಾಗಾರ
ಹಾಸನ: ಜಿಲ್ಲಾ ಸಮಗ್ರ ಮಕ್ಕಳಾ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳಾ ರಕ್ಷಣಾ ಇಲಾಖೆ ಹಾಗೂ ಸರ್ಕಾರಿ ಬಾಲಕರ ಬಾಲ ಮಂದಿರದ ಆಶ್ರಯದಲ್ಲಿ ಜೆ.ಜೆ ಕಾಯ್ದೆಯಡಿ ನೋಂದಣಿಯಾಗಿರುವ ಮತ್ತು ಮಕ್ಕಳ ಪಾಲನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ಬಾಲನ್ಯಾಯ ಕಾಯ್ದೆ ಅನುಷ್ಠಾನ ಮತ್ತು ಸಮಗ್ರ ಮಕ್ಕಳಾ ರಕ್ಷಣಾ ಯೋಜನೆ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಹೆಚ್.ಸಿ. ಚಿದಾನಂದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಪಾಲನೆ, ಪೋಷಣೆ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಕಡ್ಡಾಯವಾಗಿ ಜೆ.ಜೆ. ಕಾಯ್ದೆಯಡಿ ನೋಂದಾಯಿಸಬೇಕಾಗಿದೆ ಎಂದರು.
ನೋಂದಣಿಗೆ ಸೂಚನೆ: ಸರ್ಕಾರ ನಿಗದಿಮಾಡಿರುವ ಎಲ್ಲಾ ಸೌಲಭ್ಯಗಳನ್ನು ಕಡ್ಡಾಯವಾಗಿ ಮಕ್ಕಳಿಗೆ ಒದಗಿಸಬೇಕಾಗಿದೆ. ನಮ್ಮ ಇಲಾಖೆಯಿಂದ 2011 ರಿಂದಲೂ ಸಂಸ್ಥೆಗಳ ನೋಂದಣಿಗಾಗಿ ಪ್ರಕಟಣೆ ಹೊರಡಿಸಿ, ಖುದ್ದು ಭೇಟಿ ನೀಡಿ ಸಂಸ್ಥೆಗಳನ್ನು ನೋಂದಾಯಿಸುವಂತೆ ತಿಳಿವಳಿಕೆ ನೀಡಲಾಗುತ್ತಿದೆ. ನೋಂದಣಿಗೆ ಬಾಕಿ ಇರುವ ಸಂಸ್ಥೆಗಳು ಆದಷ್ಟು ಬೇಗ ನೋಂದಣಿಗೆ ಸೂಚಿಸಿದೆ.