ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನ
ಚನ್ನರಾಯಪಟ್ಟಣ: ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ಪರಿಷತ್ ಸ್ಥಾಪಿಸಿ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಶಾಸಕ ಸಿ. ಎನ್. ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮ್ಮೇಳನ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಸಾಂಸ್ಕೃತಿಕ ಕಾರ್ಯಕ್ರಮ: ಸಮ್ಮೇಳನದ ದಿನ ಬೆಳಗ್ಗೆ 8 ಘಂಟೆಗೆ ಧ್ವಜಾರೋಹಣ, 8.30ಕ್ಕೆ ಎಪಿಎಂಸಿ ಆವರಣದಿಂದ ಮಾಧ್ಯಮಿಕ ಶಾಲಾ ಆವರಣದವರೆಗೆ ನಾನಾ ಸ್ತಬ್ಧ ಚಿತ್ರಗಳು, ಸಮ್ಮೆಳನಾಧ್ಯಕ್ಷರ ಮೆರವಣಿಗೆ, 10.30ಕ್ಕೆ ವೇದಿಕೆ ಕಾರ್ಯಕ್ರಮ, 11.30ಕ್ಕೆ ಮಕ್ಕಳ ಕವಿಗೋಷ್ಠಿ, 12.30ಕ್ಕೆ ವಿಚಾರಗೋಷ್ಠಿ, 1.30ಕ್ಕೆ ಭೋಜನ, 2.30ಕ್ಕೆ ಗೋಷ್ಠಿ, 4 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ವಿಶೇಷ ಹತ್ತು ಜನ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ, ಸಂಜೆ 5.30ರಿಂದ 8.30ರವರೆಗೆ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ.