ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಾವ ವಿಭಾಗಕ್ಕೆ ಪಿಜಿ ಕೋರ್ಸ್?

Rashmi Kasaragodu
Updated On : 26 Jan 2014, 2:18 am

ಹಾಸನ ವೈದ್ಯಕೀಯ ಪದವಿ ಕಾಲೇಜಿನ ಜೀವ ರಸಾಯನಶಾಸ್ತ್ರ ಘಟಕ, ಶರೀರ ಕ್ರಿಯಾ ಶಾಸ್ತ್ರ, ರೋಗಲಕ್ಷಣ ಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ನ್ಯಾಯ ವೈದ್ಯ ಶಾಸ್ತ್ರ,  ಔಷಧ ಶಾಸ್ತ್ರ, ಸಮುದಾಯ ವೈದ್ಯ ಶಾಸ್ತ್ರ, ಕಿವಿ, ಗಂಟಲು, ಮೂಗು, ಜನರಲ್ ಸರ್ಜರಿ, ನೇತ್ರ ರೋಗ ಶಾಸ್ತ್ರ, ಅರವಳಿಕೆ ಚಿಕಿತ್ಸೆ (ಅನಸ್ತೇಷಿಯಾ), ಮಕ್ಕಳು, ಕೀಲು ಮತ್ತು ಮೂಳೆ, ಸ್ತ್ರೀರೋಗ ಮತ್ತು ಪ್ರಸೂತಿ ಹಾಗೂ ಚರ್ಮ ರೋಗ ವಿಭಾಗಗಳಲ್ಲಿ ಪಿಜಿ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದೆ.





ನಾಳೆ ದೇವಾಲಯ ಉದ್ಘಾಟನೆ
ಅರಕಲಗೂಡು: ತಾಲೂಕಿನ ಕಳ್ಳಿ ಮುದ್ದನ ಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಉದ್ಘಾಟನೆ ಸೋಮವಾರ ಬೆಲಗ್ಗೆ 10.30ಕ್ಕೆ ನೆರವೇರಲಿದೆ. ಇದೇ ಸಂದರ್ಭದಲ್ಲಿ ಗ್ರಾಮ ದೇವತೆ ಮತ್ತು ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಪ್ರತಿಷ್ಟಾಪನಾ ಕಾರ್ಯಕ್ರಮವೂ ಜರುಗಲಿದೆ.ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಕುಂಭಾಭಿಷೇಕ, ಬ್ರಹ್ಮ ಕಲಶ ಅಭಿಷೇಕ ಕಾರ್ಯಕ್ರಮ ಜರುಗಲಿವೆ.
ಪ್ರಶಸ್ತಿಗೆ ಆಯ್ಕೆ
ಬೆಂಗಳೂರು: ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ ಹಾಗೂ ಡಾ.ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಗೆ ಕ್ರಮವಾಗಿ ಡಾ.ಹಿ.ಶಿ. ರಾಮಚಂದ್ರೇಗೌಡ ಮತ್ತು ಟಿ. ಗಿರಿಜಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಿಳಿಸಿದೆ. ಹಿರಿಯ ಜಾನಪದ ತಜ್ಞ ಹಾಸನ ಮೂಲದ ಡಾ.ಹಿ.ಶಿ. ರಾಮಚಂದ್ರೇಗೌಡ ಮೈಸೂರು ಅವರನ್ನು ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ರು. 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಹಾಗೆಯೇ, ದಾವಣಗೆರೆಯ ಲೇಖಕಿ ಟಿ. ಗಿರಿಜಾ ಅವರನ್ನು ಡಾ.ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ರು. 15 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಪೂರ್ವಭಾವಿ ಸಭೆ
ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿಯ 2014-15ನೇ ಸಾಲಿನ ಆಯವ್ಯಯ ತಯಾರಿಸುವ ಕುರಿತಾಗಿ ಸಾರ್ವಜನಿಕರ ಸಲಹೆ ಪಡೆಯುವ ಸಲುವಾಗಿ ಸಾರ್ವಜನಿಕರು ಭಾಗವಹಿಸುವಿಕೆಗಾಗಿ ಪೂರ್ವಭಾವಿ ಸಭೆಯನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕರೆಯಲಾಗಿದ್ದು,ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement