ಲೇವಾದೇವಿ ವ್ಯವಹಾರಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಹಾಸನ: ಅಟ್ಟಾವರ ಗ್ರಾಮದಲ್ಲಿ ಅನಧಿಕೃತವಾಗಿ ಅಧಿಕ ಬಡ್ಡಿ ದರದಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಶ್ರೀ ಕೃಷ್ಣೇಗೌಡ ಅವರ ಮನೆಗೆ ಜ. 23ರಂದು ಪೊಲೀಸ್ ಸಿಬ್ಬಂದಿಯೊಡನೆ ದಾಳಿ ನಡೆಸಿ, ಅನಧಿಕೃತವಾಗಿ ಲೇವಾದೇವಿ ನಡೆಸುತ್ತಿದ್ದ ಬಗ್ಗೆ ದಾಖಲಾತಿಗಳನ್ನು ಹಾಗೂ ನಗದು ಹಣ ವಶಪಡಿಸಿಕೊಂಡಿದ್ದು, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
ಮುತ್ತುಗದ ಹೊಸೂರು ಗ್ರಾಮದಲ್ಲಿ ಎಂ.ಎಸ್. ರಂಗರಾಜು ಅಯ್ಯಂಗಾರ್, ಮುತ್ತುಗದ ಹೊಸೂರು, ದೊಡ್ಡಮಗ್ಗೆ ಹೋಬಳಿ, ಅರಕಲಗೂಡು ತಾಲ್ಲೂಕು. ರವರು ಅನಧಿಕೃತವಾಗಿ ಅಧಿಕ ಬಡ್ಡಿ ದರದಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿರುವುದಾಗಿ ಅಟ್ಟಾವರ ಗ್ರಾಮದ ನಿವಾಸಿಗಳು ನೀಡಿದ್ದ ದೂರಿನನ್ವಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಹಾಸನ ಉಪವಿಭಾಗ, ಹಾಸನ ರವರು ಸದರಿಯವರ ಮನೆಗೆ ಜ. 22ರಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಕಲೇಶಪುರರವರು ಪೊಲೀಸ್ ಸಿಬ್ಬಂದಿಯೊಡನೆ ದಾಳಿ ನಡೆಸಿ, ಅನಧಿಕೃತವಾಗಿ ಲೇವಾದೇವಿ ನಡೆಸುತ್ತಿದ್ದ ಬಗ್ಗೆ ದಾಖಲಾತಿಗಳನ್ನು ವಶಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹೂಡಲಾಗಿರುತ್ತದೆ.