ಸಾಹಿತ್ಯ ನಿಂತ ನೀರಲ್ಲ: ಪ್ರಾಧ್ಯಾಪಕ ಯತೀಶ್ವರ್
ಹಾಸನ: ಸಾಹಿತ್ಯ ಎಂದೂ ನಿಂತ ನೀರಲ್ಲ, ಹರಿಯುವ ನೀರು ಎಂದು ನಗರದ ಎವಿಕೆ ಕಾಲೇಜ್ ಕನ್ನಡ ಪ್ರಾಧ್ಯಾಪಕ ಎಸ್.ಸಿ. ಯತೀಶ್ವರ್ ಅಭಿಪ್ರಾಯಪಟ್ಟರು. ನಗರದ ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜಜ್ಸಭಾಂಗಣದಲ್ಲಿ ಕಾಲೇಜಿನ ಸಾಹಿತ್ಯ ವೇದಿಕೆ ಮತ್ತು ನವದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ, ಫಿರ್ದೋಸ್ ಮಹಿಳಾ ಸಮಾಜ ಇವರ ಸಹ ಯೋಗದಲ್ಲಿ ಗುರುವಾರ ನಡೆದ ಸಾಹಿತಿ ಆರ್.ಕೆ. ನಾರಾಯಣ್ ಸಾಹಿತ್ಯದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಬೂವನಹಳ್ಳಿ ಚನ್ನಕೇಶವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ವಿಜಯಕುಮಾರ್ ಉದ್ಘಾಟಿಸಿದರು. ಕಾಲೇಜಿನ ಹಿಂದಿ ಪ್ರಾಧ್ಯಾಪಕಿ ವೀಣಾ ಪ್ರಾರ್ಥಿಸಿದರು. ಆಂಗ್ಲ ಭಾಷೆ ಪ್ರಾಧ್ಯಾಪಕಿ ಹರ್ಷಲತಾ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ.ಕೆ. ಶಾಮ್ ಭಟ್, ಅಖಿಲ ವಚನ ಸಾಹಿತ್ಯ ಪರಿಷತ್ತಿನ ತಿ. ರಾಮಕೃಷ್ಣಯ್ಯ, ಸಾಹಿತಿ ಬಿ.ಎನ್. ರಾಮಸ್ವಾಮಿ, ಆಂಗ್ಲ ಪ್ರಾಧ್ಯಾಪಕ ನೀಲಕಂಠ ಮನ್ವಾಚಾರ್, ವಕೀಲರು ಶ್ರೀನಿವಾಸ್ ಗೌಡ, ಮಹಿಳಾ ಸಮಾಜದ ಕಾರ್ಯದರ್ಶಿ ಎಚ್.ಎಂ. ನೂರಿ, ಅಧ್ಯಕ್ಷರಾದ ಅಕ್ತರಜಾನ್ ಹಾಗೂ ಇತರರು ಇದ್ದರು.