ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಇಒಗಾಗಿ ದಿನವಿಡೀ ಕಾದ ಅಧಿಕಾರಿಗಳು

Rashmi Kasaragodu
Updated On : 26 Jan 2014, 2:16 am

ಸಕಲೇಶಪುರ: ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಆಗಮಿಸುತ್ತಾರೆಂದು ತಾಲೂಕು ಮಟ್ಟದ ಅಧಿಕಾರಿಗಳು ಇಡೀ ದಿನ ತಾಲೂಕು ಪಂಚಾಯ್ತಿ ಅವರಣದಲ್ಲಿ ಕಾದುಕುಳಿತ ಪ್ರಸಂಗ ಶುಕ್ರವಾರ ನಡೆಯಿತು. ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಕರಿಯಪ್ಪ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತಾದರೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಸಭೆಗೆ ಆಗಮಿಸುತ್ತಾರೆ ಎಂಬ ಕಾರಣಕ್ಕೆ ಸಭೆಯನ್ನು ಶುಕ್ರವಾರ 11ಕ್ಕೆ ಕರೆಯಲಾಗಿತ್ತು.
ಸಿಂಗ್ ಬಾರದ ಕಾರಣ, ನಂತರ ಸಭೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಲಾಯಿತು. ಹೀಗಾಗಿ, ಅಧಿಕಾರಿಗಳು ತಾಪಂ ಅವರಣದಲ್ಲೇ ಕಾದು ಕುಳಿತರು. ಆದರೆ, ಅಧಿಕಾರಿಗಳಿಗೆ ಕಾಯುವುದೇ ಕಾಯಕವಾಯಿತೇ ಹೊರತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜೆ 4.30 ಆದರೂ ಬರಲೇ ಇಲ್ಲ. ಇತ್ತ, ಕಾಯುತ್ತಿದ್ಧ ಅಧಿಕಾರಿಗಳಂತೂ ಸುಸ್ತೋ ಸುಸ್ತು. ಕೊನೆಗೂ 4.45ಕ್ಕೆ ಪಟ್ಟಣಕ್ಕೆ ಬಂದ ಈ ಅಧಿಕಾರಿಗಳು ತರಾತುರಿಯಲ್ಲಿ ಸಭೆ ಆರಂಭಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement