ಇಂದು ವಿಚಾರ ಸಂಕಿರಣ
ಹಾಸನ: ಸಮತಾ ಸೈನಿಕ ದಳ, ದಲಿತ ಸಾಹಿತ್ಯ ಪರಿಷತ್, ಆಡುವಳ್ಳಿ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಮೌಲ್ಯಗಳು ಮತ್ತು ಆಶಯಗಳು ಕುರಿತು ವಿಚಾರ ಸಂಕಿರಣವನ್ನು ನಗರದ ಆಡುವಳ್ಳಿ ಬಡಾವಣೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜ.27ರಂದು ಮಧ್ಯಾಹ್ನ 3ಕ್ಕೆ ಹಮ್ಮಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಸ್ಪಿ ರವಿ ಚನ್ನಣ್ಣನವರ್ ವಿಶೇಷ ಉಪನ್ಯಾಸ ನೀಡುವರು. ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಆರ್ಪಿಐ ಸತೀಶ್ ಅಧ್ಯಕ್ಷತೆ ವಹಿಸಲಿದ್ದು, ದಸಾಪ ನಾಗರಾಜ್ ಹೆತ್ತೂರು ಆಶಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ದಲಿತ ಮುಖಂಡರಾದ ನಾರಾಯಣದಾಸ್, ಉಪನ್ಯಾಸಕ ನಿಟ್ಟೂರು ಸ್ವಾಮಿ ಆಗಮಿಸಲಿದ್ದಾರೆ ಎಂದು ಅಂಬೇಡ್ಕರ್ ಯುವಕ ಸಂಘದ ಕಾರ್ಯದರ್ಶಿ ಆಡುವಳ್ಳಿ ಹೇಮಂತ್ ತಿಳಿಸಿದ್ದಾರೆ.