ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆ

Rashmi Kasaragodu
Updated On : 27 Jan 2014, 1:21 am

ಸಕಲೇಶಪುರ: ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಸಿಡೆ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕುಸುಮ(42) ಕೊಲೆಗೀಡಾದ ನತದೃಷ್ಟೆಯಾದರೆ, ಈಶ್ವರ್ ಪೂಜಾರಿ(55) ಅತ್ಮಹತ್ಯೆಮಾಡಿಕೊಂಡ ವ್ಯಕ್ತಿ. ಗಾರೆ ಕೆಲಸ ನಿರ್ವಹಿಸುತ್ತಿದ ಈಶ್ವರ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಅಲ್ಲದೆ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ. ಶನಿವಾರ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಮಲಗಿದ್ದ ವೇಳೆ ಪತ್ನಿಯ ಕುತ್ತಿಗೆ ಕಡಿದು ಕೊಲೆ ಮಾಡಿ ತಾನೂ ತನ್ನ ಕೈಗಳನ್ನು ಬ್ಲೇಡ್ಗಳಿಂದ ಕೊಯ್ದುಕೊಂಡು ಮೈಗೆಲ್ಲ ಕುಂಕುಮ ಸುರಿದುಕೊಂಡು ವಿಷ ಕುಡಿದಿದ್ದಾನೆ.  ಭಾನುವಾರ ಮುಂಜಾನೆ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ಗ್ರಾಮದ ಕೂಲಿ ಕಾರ್ಮಿಕರು ಮಹಿಳೆಯನ್ನು ಕೆಲಸಕ್ಕೆ ಕರೆಯಲು ಬಂದ ಸಮಯದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ವಿಷ ಕುಡಿದು ಅಸ್ವಸ್ಥನಾಗಿದ್ದ ಈಶ್ವರ ಪೂಜಾರಿಯನ್ನು ಪಟ್ಟಣದ ಕ್ರಾಪರ್ಡ್ ಆಸ್ಪತ್ರಗೆ ತಂದು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂದು ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮ
ಹಾಸನ: ಮೆಕ್ಯಾನಿಕಲ್ ವಿಭಾಗ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ  ಜ.27ರಂದು ಬೆಳಗ್ಗೆ 10ಕ್ಕೆ ಕಾಲೇಜಿನ ಎಜುಸ್ಯಾಟ್ ಸಭಾಂಗಣದಲ್ಲಿ ಎಐಸಿಟಿಇ ಪ್ರಾಯೋಜಿತ ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಡಾ. ಡಿ.ವಿ.ಗಿರೀಶ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿ ಭಾಷಣಕಾರರಾಗಿ, ಇನ್ಫೋಟೆಕ್ ಎಂಟರ್ಪ್ರೈಸಸ್ ಲಿಮಿಟೆಡ್, ಹೈದರಾಬಾದ್ನ ಉಪ ಮುಖ್ಯ ವ್ಯವಸ್ಥಾಪಕದ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸುವರು. ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಟಿ.ರಂಗಸ್ವಾಮಿ, ಕಾರ್ಯಕ್ರಮ ಸಂಯೋಜಕ  ಡಾ.ಕೆ.ಮಂಜುನಾಥ್ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement