ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿದ ಚೆಸ್ಕಾಂ

Rashmi Kasaragodu
Updated On : 27 Jan 2014, 1:20 am

ಬೇಲೂರು: 65ನೇ ಗಣರಾಜ್ಯೋತ್ಸವದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಾಬರಾಜು ಇಲಾಖೆ (ಚೆಸ್ಕಾಂ)ಯಲ್ಲಿ ರಾಷ್ಟ್ರ ದ್ವಜವನ್ನು ಅರ್ಧಕ್ಕೆ ಹಾರಿಸಲಾಗಿತ್ತು. ಪಟ್ಟಣದ ಚೆಸ್ಕಾಂ ಮುಖ್ಯ ಕಚೇರಿಯಲ್ಲಿ ಭಾನುವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ದ್ವಜ ಹಾರಿಸಿದ್ದು ಅರ್ಧಕ್ಕೆ ಹಾರಾಡುತ್ತಿತ್ತು. ಇದನ್ನು ಯಾವ ಅಧಿಕಾರಿಗಳೂ ಗಮನಿಸದೇ ಇದ್ದಿದ್ದು ಆಶ್ಚರ್ಯವಾಗಿತ್ತು. ನಂತರ ಪೊಲೀಸರು ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪುನಾ ದ್ವಜವನ್ನು ಹಾರಿಸಲಾಯಿತು. ಈ ಬಗ್ಗೆ ಚೆಸ್ಕಾಂ ಎಂಜಿನೀಯರ್ ಮಲ್ಲಿಕಾರ್ಜುನ್ ಮಾತನಾಡಿ, ಬೆಳಗ್ಗೆ ದ್ವಜವನ್ನು ಸರಿಯಾದ ಕ್ರಮದಲ್ಲಿ ಹಾರಿಸಲಾಗಿತ್ತು. ಗಾಳಿ ಹೆಚ್ಚಾಗಿದ್ದರಿಂದ ಅಕಸ್ಮಿಕ ಹಾಗೂ ಅಚಾತುರ್ಯದಿಂದ ದ್ವಜ ಕೆಳಗಿಳಿದಿರುವುದು ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಅತಾಚುರ್ಯ ನಡೆಯದಂತೆ ಕ್ರಮವಹಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement